Advertisement

ತೊಗರಿ ಖರೀದಿಗೆ ಸಹಕರಿಸಲು ಅನ್ನದಾತರಿಗೆ ಸ್ವಾಮೀಜಿ ಸಲಹೆ

05:33 PM Jan 21, 2021 | Nagendra Trasi |

ದೇವರಹಿಪ್ಪರಗಿ: ದೇವರಹಿಪ್ಪರಗಿ ವ್ಯಾಪ್ತಿಯ ಎಲ್ಲ ರೈತ ಸಮುದಾಯದ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸದಯ್ಯನಮಠದ ವೀರ ಗಂಗಾಧರ ಸ್ವಾಮೀಜಿ ಹೇಳಿದರು. ಪಟ್ಟಣದ ಸಿಂದಗಿ ರಸ್ತೆಯಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ತೂಕದ ಯಂತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರೈತರ ಶ್ರಮಕ್ಕೆ ಖರೀದಿ ಕೇಂದ್ರಗಳು ಯೋಗ್ಯ ದರ ನೀಡಿ ಸಹಕಾರ ನೀಡುತ್ತಿವೆ. ರೈತರು ಸಹ ಶಾಂತಿ, ಸಹನೆಯಿಂದ ಸರದಿ ಪ್ರಕಾರ ಬೆಳೆ ನೀಡಲು ಮುಂದಾಗಬೇಕು ಎಂದರು.

Advertisement

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಾಶೀನಾಥ ಮಸಬಿನಾಳ ಮಾತನಾಡಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ವಿಂಟಲ್‌ಗೆ ಆರು ಸಾವಿರ ರೂ. ದರದಂತೆ ಪ್ರತಿ ರೈತನಿಂದ 20 ಕ್ವಿಂಟಲ್‌ ತೊಗರಿ ಖರೀದಿಸಲಾಗುವುದು. ಈ ಭಾಗದ ಪ್ರತಿಯೊಬ್ಬ ರೈತರ ತೊಗರಿ ಖರೀದಿಯಾಗುವವರೆಗೂ ಎಲ್ಲವನ್ನು ಪ್ರಾಮಾಣಿಕವಾಗಿ ಖರೀದಿ ಮಾಡಲಾಗುವುದು ಎಂದು ಹೇಳಿ ರೈತರ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಪಿಕೆಪಿಎಸ್‌ ಕಾರ್ಯದರ್ಶಿ ನಿಂಗು ಜಡಗೊಂಡ, ಬಂಡೆಪ್ಪ ದಿಂಡವಾರ, ಬಾಬುಗೌಡ ಪಾಟೀಲ, ಕಾಸು ಜಲಕತ್ತಿ, ಬಸಪ್ಪ ಮಸಬಿನಾಳ, ಶ್ರೀಧರ ನಾಡಗೌಡ, ಬಸಯ್ಯ ಮಲ್ಲಿಕಾರ್ಜುನಮಠ, ಜಯರಾಮ್‌ ನಾಡಗೌಡ, ವಿನೋದ ಪಾಟೀಲ, ಯಮನೂರಿ ಸಣ್ಣಕ್ಕಿ, ಕಾಶೀನಾಥ ರಾಮಗೊಂಡ, ನಿಂಗನಗೌಡ ಬಿರಾದಾರ, ರಮೇಶ ಮ್ಯಾಕೇರಿ, ವೀರೇಶ ಕುದರಿ,ಸುರೇಶ ಒಂಟೆತ್ತಿನ, ಬಸವರಾಜ ಹಳಿಮನಿ, ದಯಾನಂದ ರಾಠೊಡ, ಶಿವಯ್ಯ ಸದಯ್ಯನಮಠ, ನಿಂಗು ನಾಗರಾಳ, ಪಿಂಟು ಭಾಸುತ್ಕರ್‌, ಗೌಡು ಯಾಳಗಿ, ಸಾಹೇಬಗೌಡ ಮದ್ದರಕಿ ಸೇರಿದಂತೆ ಸಿಬ್ಬಂದಿ, ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next