Advertisement
ಕೋಲ್ಕತಾದಲ್ಲಿ ಸುರೇಂದ್ರನಾಥ ಮಿತ್ರರ ಮನೆಗೆ 1881ರ ನವೆಂಬರ್‌ನಲ್ಲಿ ನರೇಂದ್ರ (ಸ್ವಾಮಿ ವಿವೇಕಾನಂದ) ತೆರಳಿದ್ದಾಗ ಅಲ್ಲಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು. ಇದು ಅವರಿಬ್ಬರ ಮೊದಲ ಭೇಟಿ. ನರೇಂದ್ರನಿಗೆ ಪರಮಹಂಸ ಅವರ ವ್ಯಕ್ತಿತ್ವದಲ್ಲಿ ವಿಶೇಷ ಕಂಡಿತ್ತು. ಅವರಿಗೆ ಗುರುಗಳು “ದೇವರನ್ನು ನೋಡಿದ್ದೀಯಾ’ ಎಂದಾಗ “ಹೌದು’ ಎಂದದ್ದು ಅವರ ಜೀವನಕ್ಕೆ ತಿರುವು ನೀಡಿತು.
Related Articles
Advertisement
1884ರ ಫೆಬ್ರವರಿ 25ರಂದು ತಂದೆ ತೀರಿದಾಗ ನರೇಂದ್ರನಿಗೆ ರಾಮಕೃಷ್ಣರು ಸಾಂತ್ವನ ಹೇಳಿದ್ದರು. ಮುಂದೆ ಅವರು ರಾಮಕೃಷ್ಣ ಅವರನ್ನು ಗುರುಗಳನ್ನಾಗಿ ಸ್ವೀಕರಿಸಿದರು. 1886ರ ಜನವರಿಯಲ್ಲಿ ರಾಮಕೃಷ್ಣರು ತಮ್ಮ 12 ಮಂದಿ ಶಿಷ್ಯರಿಗೆ ಸನ್ಯಾಸ ದೀಕ್ಷೆ ನೀಡಿದರು.ಈ ಸಂದರ್ಭ ಅವರ ಹೆಸರನ್ನೂ ಬದಲಾವಣೆ ಮಾಡಲಾಯಿತು. ನರೇಂದ್ರನ ಹೆಸರು ಸ್ವಾಮಿ ವಿವೇಕಾನಂದ ಎಂದಿಡಲಾಯಿತು.
1888 :
1886ರ ಆಗಸ್ಟ್ 16ರಂದು ರಾಮಕೃಷ್ಣ ಪರಮಹಂಸರು ನಿಧನ ಹೊಂದಿದರು. ಒಂದು ತಿಂಗಳ ಅನಂತರ ಬಾರನಗೋರದಲ್ಲಿ ಶಿಥಿಲವಾದ ಮನೆಯನ್ನು ಖರೀದಿಸಿ, ಮುಂದೆ ಆ ಮನೆಯೇ ರಾಮಕೃಷ್ಣ ಮಠದ ಮೊದಲ ಶಾಖೆಯಾಯಿತು. ಈಗ ವಿಶ್ವಾದ್ಯಂತ ಶಾಖೆಗಳನ್ನು ಹೊಂದಿದೆ. 1888ರಲ್ಲಿ ಮೊದಲ ಬಾರಿಗೆ ಸಹಚರರೊಂದಿಗೆ ವಿವೇಕಾನಂದರು ವಾರಾಣಸಿಗೆ ಪ್ರಯಾಣಿಸಿದರು.
1892 :
ನಡೆದುಕೊಂಡು, ಎತ್ತಿನ ಗಾಡಿ, ರೈಲಿನಲ್ಲೇ ಹೆಚ್ಚಾಗಿ ಭಾರತದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಸ್ವಾಮಿ ವಿವೇಕಾನಂದರು ಸಂಚರಿಸಿ ದ್ದರು. ಹಾಗಾಗಿ ಪರಿವ್ರಾಜಕ ಸನ್ಯಾಸಿಯೆಂದೇ ಪ್ರಸಿದ್ಧರಾಗಿದ್ದರು. 1892ರ ಡಿಸೆಂಬರ್‌ನಲ್ಲಿ ವಿವೇಕಾನಂದರು ಕನ್ಯಾಕುಮಾರಿಗೆ ಭೇಟಿ ನೀಡಿದ್ದು, ಪಾರ್ವತಿ ದೇವರ ದರ್ಶನ ಪಡೆದಿದ್ದರು. ಇದು ಅವರ ನೆಚ್ಚಿನ ತಾಣವಾಗಿದ್ದು, ಇಲ್ಲೇ ಬಳಿಕ ಅವರ ಮೂರ್ತಿಸ್ಥಾಪಿಸಲಾಯಿತು.
1893 :
ವಿವೇಕಾನಂದರು ಕೊಲಂಬಿಯಾ, ಹಾಂಕಾಂಗ್, ಒಸಾಕೋ, ಕ್ಯೂಟೋ, ಟೋಕಿಯೋದಲ್ಲಿ ನೀಡಿದ ಪ್ರವಚನದ ಬಳಿಕ ಚಿಕಾಗೋ ಧರ್ಮ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಲು ಅವಕಾಶ ದೊರೆಯಿತು. ಅಂದಿನ ಭಾಷಣ ಇಂದಿಗೂ ಪ್ರಮುಖ ದಾಖಲೆಯಾಗಿ ಉಳಿದಿದ್ದು, ಭಾರತೀಯರ ಸಂಸ್ಕೃತಿ ಮತ್ತು ಮಹತ್ವವನ್ನು ಜಗತ್ತಿಗೆ ಸಾರಿದರು.