Advertisement

99 ನೇ ವಯಸ್ಸಿನಲ್ಲಿ ದ್ವಾರಕಾ ಮಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ನಿರ್ಯಾಣ

06:17 PM Sep 11, 2022 | Team Udayavani |

ನವದೆಹಲಿ: ಗುಜರಾತ್ ನ ದ್ವಾರಕಾ ಮಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ 99 ನೇ ವಯಸ್ಸಿನಲ್ಲಿ ಬ್ರಹ್ಮೀಭೂತರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ನರಸಿಂಗ್‌ಪುರ ಜಿಲ್ಲೆಯ ಶ್ರೀಧಾಮದಲ್ಲಿ ಇಹಲೋಕ ತ್ಯಜಿಸಿದ್ದಾರೆ.

Advertisement

ವರದಿಗಳ ಪ್ರಕಾರ, ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಹೃದಯಾಘಾತದಿಂದ ಅವರು ಭಾನುವಾರ, ಸೆ 11) ಆಶ್ರಮದಲ್ಲಿ 3:50 ಕ್ಕೆ ಕೊನೆಯುಸಿರೆಳೆದಿದ್ದಾರೆ. ಸ್ವರೂಪಾನಂದ ಸರಸ್ವತಿ ಅವರ ಅಂತಿಮ ವಿಧಿಗಳು ಸೋಮವಾರ (ಸೆ 12) ನಡೆಯಲಿದೆ.

”ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಅಗಲುವಿಕೆಯಿಂದ ತೀವ್ರ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ಅವರ ಅನುಯಾಯಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ!” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

”ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಜೀ ಮಹಾರಾಜ್ ಅವರ ಅಗಲುವಿಕೆಯ ಸುದ್ದಿ ಕೇಳಿ, ಮನಸ್ಸು ತೀವ್ರ ದುಃಖವಾಯಿತು. ಸ್ವಾಮೀಜಿ ತಮ್ಮ ಇಡೀ ಜೀವನವನ್ನು ಧರ್ಮ, ಆಧ್ಯಾತ್ಮಿಕತೆ ಮತ್ತು ದಾನಕ್ಕಾಗಿ ಮುಡಿಪಾಗಿಟ್ಟರು.2021 ರಲ್ಲಿ ಪ್ರಯಾಗರಾಜ್‌ನಲ್ಲಿ ಗಂಗಾ ಸ್ನಾನ ಮಾಡಿದ ನಂತರ, ಅವರ ಆಶೀರ್ವಾದವನ್ನು ಪಡೆದಿದ್ದೆ” ಎಂದು ಪ್ರಿಯಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

1982 ರಲ್ಲಿ, ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಗುಜರಾತ್‌ನ ದ್ವಾರಕಾದಲ್ಲಿರುವ ದ್ವಾರಕಾ ಶಾರದಾ ಪೀಠ ಮತ್ತು ಬದರಿನಾಥದ ಜ್ಯೋತಿರ್ ಮಠದ ಪೀಠಾಧಿಪತಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next