Advertisement

ಸ್ವಾಮಿ ಶ್ರದ್ಧಾನಂದ: ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಮನವಿ

02:29 PM Aug 04, 2021 | Team Udayavani |

ಬೆಂಗಳೂರು: ಮೂವತ್ತು ವರ್ಷಗಳ ಹಿಂದೆ ಬೆಚ್ಚಿ ಬೀಳಿಸಿದ ನೂರಾರು ಕೋಟಿ ರೂ. ಆಸ್ತಿಗಾಗಿ ಮೈಸೂರಿನ ಮಾಜಿ ದಿವಾನ್‌ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳು ಶಕೀರಾ ಖಲೀಲಿ ಅವರ ಹತ್ಯೆ ಅಪರಾಧಿ, ಪತಿ ಮುರಳಿ ಮನೋಹರ್‌ ಮಿಶ್ರಾ ಅಲಿಯಾಸ್‌ ಸ್ವಾಮಿ ಶ್ರದ್ಧಾ
ನಂದ(83) ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಲು ಮುಂದಾಗಿದ್ದಾನೆ.

Advertisement

ಸುಮಾರು 27 ವರ್ಷಗಳಿಂದ ಮಧ್ಯಪ್ರದೇಶದ ಸಾಗರ್‌ ಜಿಲ್ಲೆ ಕಾರಾಗೃಹದಲ್ಲಿ ಇರುವ ಸ್ವಾಮಿ ಶ್ರದ್ಧಾನಂದ ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ಅರ್ಜಿ ಸಲ್ಲಿ ಸಲು ನಿರ್ಧರಿಸಿದ್ದಾನೆ ಎಂದು ತಿಳಿದು ಬಂದಿದೆ. 1991ರಲ್ಲಿ ಪತ್ನಿ ಶಕೀರಾ ಖಲೀಲಿ ಅವರನ್ನುಕಾಫಿಯಲ್ಲಿ ನಿದ್ದೆ ಮಾತ್ರೆ ಹಾಕಿ ಹತ್ಯೆಗೈದು, ಮನೆ ಹಿಂಭಾಗದಲ್ಲಿ ಗೋಡೆಯ ಹಿಂದೆಯೇ ಹೂತಿಟ್ಟಿದ್ದ. ಬಳಿಕ ಸತ್ಯ ಬಯಲಾಗಿತ್ತು.

ಏನಿದು ಘಟನೆ?: ಮಾಜಿ ದಿವಾನ್‌ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳು ಶಕೀರಾ ಕಲಿಲಾ ಅವರು ಐಎಫ್ಎಸ್‌ ಅಧಿಕಾರಿ, ಇರಾನ್‌ನ ಮಾಜಿ ರಾಯಭಾರಿ ಅಕ್ಬರ್ ಖಲೀಲಿ ಎಂಬವರನ್ನು 1964ರಲ್ಲಿ ಮದುವೆಯಾಗಿದ್ದು,ದಂಪತಿಗೆ ನಾಲ್ವರು ಮಕ್ಕಳು ಇದ್ದಾರೆ. 1983ರಲ್ಲಿ ರಿಚ್ಮಂಡ್ ರಸ್ತೆಯಲ್ಲಿರುವ ಆಸ್ತಿ ವಿಚಾರವಾಗಿ ದೆಹಲಿಯಲ್ಲಿ ದೇವಮಾನವ ಎಂದು ಹೇಳಿಕೊಂಡಿದ್ದ ಆರೋಪಿ ಶ್ರದ್ಧಾನಂದನನ್ನು ಶಕೀರಾ ಮತ್ತು ಕುಟುಂಬ ಭೇಟಿಯಾಗಿತ್ತು. ಬೆಂಗಳೂರಿಗೆ ಬಂದು ಸಮಸ್ಯೆ ಬಗೆಹರಿಸಿಕೊಡುವಂತೆ ಶಕೀರಾ ಮನವಿ ಮಾಡಿದ್ದರು. ಹೀಗಾಗಿ ಅಪರಾಧಿ ಬೆಂಗಳೂರಿಗೆ ಬಂದಿದ್ದ. ಇದೇ ವೇಳೆ ಅಕºರ್‌ ಖಲೀಲಿ ಅವರನ್ನು ಇರಾನ್‌ನ ರಾಜತಾಂತ್ರಿಕ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಈ ಸಂದರ್ಭವನ್ನು ಬಳಸಿಕೊಂಡ ಅಪರಾಧಿ, ಅಕ್ಬರ್ ಖಲೀಲಿ ಅವರಿಂದ 1985ರಲ್ಲಿ ಶಕೀರಾ ಅವರಿಗೆ ವಿಚ್ಛೇದನ ಕೊಡಿಸಿ,
1986ರಲ್ಲಿ ಮದುವೆಯಾಗಿದ್ದ. 1987 ಶಕೀರಾ ಅವರ ಮೂಲಕ ರಿಚ್ಮಂಡ್ ರಸ್ತೆಯಲ್ಲಿದ್ದ ಏಳು ಎಕರೆ ಜಾಗ ಸೇರಿ ನೂರಾರುಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ಜಿಪಿಎ ಮಾಡಿಕೊಂಡಿದ್ದ. ಆದರೆ ಮಕ್ಕಳು, ತಾಯಿ ಜತೆ ಮಾತನಾಡುತ್ತಿದ್ದನ್ನು ಸಹಿಸಿಕೊಳ್ಳದ
ಅಪರಾಧಿ, ಶಕೀರಾ ಕೊಲೆಗೆ ನಿರ್ಧರಿಸಿ ಕೃತ್ಯ ವೆಸಗಿದ್ದ.

ಇದನ್ನೂ ಓದಿ:ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ

ಭೀಕರ ಕೊಲೆ: ಅಸಾಧಾರಣ ತನಿಖೆ
1991ರ ಮೇ 28ರಂದು ಶಕೀರಾರನ್ನು ಹತ್ಯೆಗೈದಿದ್ದ. ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ಜಿಪಿಎ ಮಾಡಿಕೊಂಡ ಶದ್ಧಾನಂದ, ಪತ್ನಿಗೆ ಕಾಫಿಯಲ್ಲಿ ಮಾದಕ ವಸ್ತುವನ್ನು ಹಾಕಿ ಮತ್ತು ಬರುವಂತೆ ಮಾಡಿದ್ದಾನೆ.ಬಳಿಕ ಆಕೆಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಜೀವಂತ ಹೂತು ಹಾಕಿದ್ದ. ಕೆಲ ದಿನಗಳ ಬಳಿಕ ಶಕೀರಾ ಪುತ್ರಿ ಸಬಾಹ ಪ್ರಶ್ನಿಸಿದಾಗ ವಿದೇಶಕ್ಕೆ ತೆರಳಿರುವುದಾಗಿ ಹೇಳಿದ್ದ. ಕೊನೆಗೆ ಅನುಮಾನಗೊಂಡ ಪುತ್ರಿ 1992 ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎರಡು ವರ್ಷಗಳ ನಿರಂತರ ತನಿಖೆ ನಡೆಸಿದ ಪೊಲೀಸರು 1994ರಲ್ಲಿ ರಿಚ್ಮಂಡ್ ರಸ್ತೆಯಲ್ಲಿದ್ದ ಮನೆಯ ಹಿಂಭಾಗದ ಗೋಡೆಯ ಹಿಂದೆ ಹೂತಿಟ್ಟಿದ್ದ ಶಕೀರಾ ಅವರ ತಾಯಿ, ಮಗಳಿಗೆ ನೀಡಿದ್ದ ಕೆಂಪು,ಕಪ್ಪು ಹರಳಿದ ಉಂಗುರಗಳು, ಅಸ್ಥಿಪಂಚರದ ಸುತ್ತ ಇದ್ದ ಗೌನ್‌ಕಂಡು ಈಕೆಯೇ ಶಕೀರಾ ಎಂದು ಪತ್ತೆ ಹಚ್ಚಿದ್ದರು. ಬಳಿಕ ಅಪರಾಧಿ ಶ್ರದ್ಧಾನಂದನನ್ನು ಬಂಧಿಸಲಾಗಿತ್ತು.2005ರಲ್ಲಿ ಸೆಷನ್‌ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಹೈಕೋರ್ಟ್‌ ಕೂಡ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2008ರಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next