Advertisement

ಅಜ್ಮೇರ್ ದರ್ಗಾ ಬಾಂಬ್ ಸ್ಫೋಟ ಕೇಸ್; ಸ್ವಾಮಿ ಅಸೀಮಾನಂದ ಖುಲಾಸೆ

05:23 PM Mar 08, 2017 | Team Udayavani |

ಜೈಪುರ್: ಜೈಪುರದ ಪ್ರಸಿದ್ಧ ಅಜ್ಮೇರ್ ಷರೀಫ್ ದರ್ಗಾ ಸಮೀಪ 2007ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಮುಖಂಡ ಸ್ವಾಮಿ ಅಸೀಮಾನಂದ, ಆರ್ ಎಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ.

Advertisement

2007ರ ಅಕ್ಟೋಬರ್ 11ರಂದು ಟಿಫನ್ ಬಾಕ್ಸ್ ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಈ ಪ್ರಕರಣದಲ್ಲಿ ಮೂವರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.

ಅಸೀಮಾನಂದ ಹಾಗೂ ಇನ್ನುಳಿದ ಆರು ಮಂದಿ ವಿರುದ್ಧ ಕೋಮು ಸಾಮರಸ್ಯ ಹದಗೆಡಿಸಿದ ಹಾಗೂ ಕೊಲೆ ಆರೋಪದ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅಜ್ಮೇರ್ ನ ಪ್ರಸಿದ್ಧ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಛಸ್ತಿ ದರ್ಗಾದ ಸಮೀಪ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 3 ಮಂದಿ ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮೂವರು ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದ್ದ ಸ್ವಾಮಿ ಅಸೀಮಾನಂದ ಹಾಗೂ ಇಂದ್ರೇಶ್ ಕುಮಾರ್ ಅವರನ್ನು ಆರೋಪಮುಕ್ತಗೊಳಿಸಿದೆ.

ಅಜ್ಮೇರ್ ಬಾಂಬ್ ಸ್ಫೋಟ ಪ್ರಕರಣವಲ್ಲದೆ ಅಸೀಮಾನಂದ ವಿರುದ್ಧ ಮಹಾರಾಷ್ಟ್ರದ ಮಾಲೇಂಗಾವ್ ನಲ್ಲಿ 2006ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಿವೆ. 2007ರ ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಕೇಸ್, ಸಮಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣಗಳು ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next