Advertisement

ಏ.25ಕ್ಕೆ ಶಿವಗಂಗೆ ಸ್ವಣಾಂಭದೇವಿ ರಥೋತ್ಸವ

11:08 AM Apr 21, 2019 | Team Udayavani |

ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿ ಶಿವಗಂಗೆಯ ದಕ್ಷಿಣಕಾಶಿ ಶಿವಗಂಗೆಯ ಸ್ವಸ್ತೀಶ್ರೀ ಜಯಭ್ಯುದಯ ಶಾಲಿವಾಹನಶಕ 1941ನೇ ಶ್ರೀ ಕಾರನಾಮ ಸಂವತ್ಸರದ ಚೈತ್ರಮಾಸೆ, ಕೃಷ್ಣ ಪಕ್ಷೇ, ಚೌತಿ ಏ.23ನೇ ಮಂಗಳವಾರದಿಂದ ಏಕಾದಶಿ ಏ.30ರವರೆಗೆಶ್ರೀ ಹೊನ್ನಾದೇವಮ್ಮ (ಸ್ವರ್ಣಾಂಭ) ಅಮ್ಮನವರ ರಥೋತ್ಸವ ಹಾಗೂ ಉತ್ಸವಾದಿಗಳು ನಡೆಯಲಿದೆ.

Advertisement

ಏ.23ರ ಮಂಗಳ‌ವಾರದಂದು ಸರ್ಕಾರದ ವತಿಯಿಂದ ಶ್ರೀಅಮ್ಮನವರಆರತಿ. ಏ.25ರಂದು ಗುರುವಾರ ಸರ್ಕಾರ ಮತ್ತು ಭಕ್ತಾದಿಗಳಿಂದ ಶ್ರೀಸ್ವರ್ಣಾಂಬ ಅಮ್ಮನವರ ರಥೋತ್ಸವ. ರಾತ್ರಿ 10ಗಂಟೆಗೆ ಶ್ರೀ ಹೋನ್ನಮ್ಮ ಗವಿಮಠದವರಿಂದ ಮುತ್ತಿನ ಪಲ್ಲಕ್ಕಿಉತ್ಸವ ಹಾಗೂ ತೆಪ್ಪೋತ್ಸವ.

ಶುಕ್ರವಾರ 26 ರಂದು 7ಗಂಟೆಗೆ ಶಿವಗಂಗೆಯ ಎಸ್‌.ಎಚ್‌.ಮೈಲಾರಲಿಂಗಯ್ಯ ಕುಟುಂಬದವರಿಂದ ರುದ್ರಾಕ್ಷಿ ಮಂಟಪೋತ್ಸವ. ಶನಿವಾರ 27ರಂದು ರಾತ್ರಿ 10ಕ್ಕೆ ಎಡೆಹಳ್ಳಿ ಯಜಮಾನ್‌ ಗಂಗಣ್ಣ ಕುಟುಂಬದವರಿಂದ ಸಿಂಹವಾಹನ ಮತ್ತು ಕುದುರೆಉತ್ಸವ .

ಭಾನುವಾರ 28ರಾತ್ರಿ ಹೊಸಪಾಳ್ಯದ ಬೋರಯ್ಯನವರ ಕುಟುಂಬದವರಿಂದ ಪೀಠ ಪ್ರಭಾವಳಿ. ಭಾನುವಾರ 29ರಂದು ಎಸ್‌.ಆರ್‌.ರೇವಣಸಿದ್ದಪ್ಪನವರ ಕುಟುಂದವರಿಂದ ಚಿತ್ರ ಮಂಟಪೋತ್ಸವ ಮತ್ತು ದರ್ಬಾರ್‌ಅಲಕಾಂರ.

ಮಂಗಳವಾರ ರಾತ್ರಿ30 ರಂದು ರಾತ್ರಿ 12 ಗಂಟೆಗೆ ಶ್ರೀ ಹೋನ್ನದೇವಯಮ್ಮನವರ ಉತ್ಸವ ಸಮಿತಿಯಿಂದ ಹೂವಿನ ಪಲ್ಲಕ್ಕಿ ಮತ್ತು ದರ್ಬಾರ್‌ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಪಾರುಪತ್ತೆದ್ದಾರ್‌ ಟಿ.ಶ್ರೀನಿವಾಸ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next