Advertisement
ರೈತ ಬೆಳೆದ ಬೆಳೆಗೆ ಮತ್ಯಾರೋ ದರ ನಿರ್ಧರಿಸಿದರೆ ಹೇಗೆ..? ರೈತ ತನ್ನ ಬೆಳೆಗೆ ತಾನೇ ಬೆಲೆ ನಿರ್ಧರಿಸಬೇಕು,ಕೃಷಿಕನೇ ವ್ಯಾಪಾರಸ್ಥ ಆಗಬೇಕು ಎನ್ನುವುದು, ಬಳ್ಳಾರಿ ಜಿಲ್ಲಾ ಖಾನಾ ಹೊಸಹಳ್ಳಿ ಹೋಬಳಿ ಹುಲಿಕೇರಿಯ ಸಾವಯವ ಕೃಷಿಕ ಎಚ್.ವಿ. ಸಜ್ಜನ್ ಅವರ ಮಾತು. ಅವರೀಗಕೃಷಿಉತ್ಪನ್ನಗಳನ್ನು ಮೌಲ್ಯವರ್ಧಿಸಿ ಮಾರಾಟ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಅನೇಕ ಸೋಲು,ಕಷ್ಟ-ನಷ್ಟಗಳ ನಡುವೆಯೂ ದೊಡ್ಡ ಮಟ್ಟದಕೃಷಿ ಮಾಡುತ್ತಿದ್ದಾರೆ.
Related Articles
Advertisement
ನಷ್ಟ ತಪ್ಪಿಸಿದ ಪಪ್ಪಾಯ್ ಪೇಯ… : ಲಾಕ್‌ಡೌನ್ ವೇಳೆ ಇವರು ನಾಲ್ಕು ಎಕರೆಯಲ್ಲಿ ಬೆಳೆದ ಸಾವಯವ ಪಪ್ಪಾಯಿಗೆಒಳ್ಳೆಯ ರೇಟ್ ಸಿಗಲಿಲ್ಲ. ಆಗ ಸಜ್ಜನ್‌ಕಂಗಲಾಗದೇ ಅದನ್ನೂ ಮೌಲವರ್ಧಿಸಲಿಕ್ಕೆಮುಂದಾದರು! ಮೊದಲ ಹಂತದಲ್ಲಿ ಫಂಗಸ್ ಬಂತು. ನಂತರ ತಪ್ಪುಗಳನ್ನುಸರಿಪಡಿಸಿಕೊಂಡಿದ್ದರಿಂದ ಈಗ ಒಂದುಕ್ವಿಂಟಲ್ ಪಪ್ಪಾಯಿ ಹಣ್ಣಿನ ಪೇಯ ಮಾರಾಟಕ್ಕೆ ಸಿದ್ಧಗೊಂಡಿದೆ!
ಖರೀದಿದಾರರೇ ಪ್ರಚಾರಕರು! : ಇವರ ಮೌಲ್ಯವರ್ಧಿತ ಉತ್ಪನ್ನಗಳು ರುಚಿ ಕರ ಮತ್ತು ಸ್ವಾದಿಷ್ಟಕರ ಆಗಿವೆ. ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಇವುಗಳ ಸವಿಕಂಡುಂಡ ಜನರೇ ಉತ್ಪನ್ನಗಳ ಅಸಲಿ ಪ್ರಚಾರಕರು! ರಾಜ್ಯ ಹೆದ್ದಾರಿ-50ರಹುಲಿಕೇರಿ ಕ್ರಾಸ್ ಬಳಿ ಸಾವಯವ ಮಳಿಗೆ ಮತ್ತು ಜ್ಯೂಸ್ ಸೆಂಟರ್ ಇದೆ. ಇಲ್ಲಿ ಹಾಗೂ ಮನೆಯಲ್ಲೂ ಉತ್ಪನ್ನಗಳನ್ನು ಮಾರುತ್ತಾರೆ. ಹೀಗೆ ಇವರೇ ಸೃಷ್ಟಿಸಿಕೊಂಡ ಮಾರುಕಟ್ಟೆ ಜಾಲದ ಹಿಂದೆ ದೊಡ್ಡ ಶ್ರಮವಿದೆ.
ಉದ್ಯೋಗ ನೀಡಿಕೆ… : ಸಜ್ಜನ್‌ಕಳೆದ ಐದಾರು ವರ್ಷದಿಂದ, ವರ್ಷದ ಉದ್ದಕ್ಕೂ 3-4 ಮಂದಿಗೆಕೆಲಸ ನೀಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿಭಾಗಶಃ ಎಲ್ಲಾವ್ಯವಹಾರಗಳು ಸ್ತಬ್ಧಆದರೂ ಇವರ ಉತ್ಪನ್ನಗಳಮಾರಾಟದ ಭರಾಟೆ ಜೋರಾಗಿತ್ತು! “ಕೃಷಿ ಇಲಾಖೆಸಿರಿಧಾನ್ಯಗಳ ಸಂಸ್ಕರಣೆ ಯಂತ್ರ ಮತ್ತು ತೋಟಗಾರಿಕೆಇಲಾಖೆ ಡ್ರೈಯರನ್ನುಸಬ್ಸಿಡಿಯಲ್ಲಿ ನೀಡಿದ್ದು ಅನುಕೂಲ ಆಯ್ತು. ಉಳಿದಂತೆ ಲಭ್ಯ ಪರಿಕರಗಳನ್ನುಬಳಸಿ ಉತ್ಪನ್ನಗಳ ಮೌಲ್ಯವರ್ಧನೆಮಾಡುತ್ತೇವೆ. ಇದರಲ್ಲಿ ನನ್ನ ಪತ್ನಿಸುಲೋಚನ ಅವರ ಪಾತ್ರ ದೊಡ್ಡದು’ ಎನ್ನುತ್ತಾರೆ ಸಜ್ಜನ್.ರೈತರಿಗೆ ಬೆಳೆಗಳ ಮೌಲ್ಯವರ್ಧನೆ ಮಾಡುವ ಬಗೆಯನ್ನುಹೇಳಿಕೊಟ್ಟು, ಸಾವಯವ ಸಮೂಹಕ್ಕೆ ಶಕ್ತಿ ತುಂಬುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ.
ಡಿಜಿಟಲ್ ಸ್ಟೋರ್ ಆರಂಭ… :
ಕೃಷಿಕರ ಬೆಳೆಗೆಕೃಷಿಕರೇ ಬೆಲೆ ನಿಗದಿ ಮಾಡುವ ದಿನಗಳು ಬೇಗ ಬರಬೇಕು.ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಬೇಕು ಎಂಬುದು ನನ್ನ ಆಸೆ,ಕನಸು. ಆ ಉದ್ದೇಶದಿಂದಲೇ ಈಗ ಒಂದು ಡಿಜಿಟಲ್ ಸ್ಟೋರ್ ಆರಂಭಿಸಲಾಗಿದೆ. ಇದು ಸಂಪೂರ್ಣ ಅನ್‌ಲೈನ್ ಬ್ಯುಸಿನೆಸ್. “ಸುಭಿಕ್ಷಾ ಸಾವಯವಕೃಷಿಕರ ಬಹುರಾಜ್ಯ ಸಹಕಾರ ಸಂಘದ ಅಧ್ಯಕ್ಷರಾದ ಆ. ಶ್ರೀ. ಆನಂದ ಅವರ ಮಾರ್ಗದರ್ಶನದಲ್ಲಿ ಈ ಸ್ಟೋರ್ ಬೆಂಗಳೂರಿನಲ್ಲಿ ತನ್ನ ಸೇವೆ ಆರಂಭಿಸಿದೆ. ಮೊದಲ ಹಂತದಲ್ಲಿ 72 ಸಾವಯವ ಉತ್ಪನ್ನಗಳು ಲಭ್ಯ ಇವೆ. ಮುಂದೆ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡುವ ಯೋಜನೆ ಇದೆ ಎನ್ನುತ್ತಾರೆ ಎಚ್.ವಿ ಸಜ್ಜನ್. ಆಸಕ್ತರು https://subhikshaf2c.com/W ಗೆ ಭೇಟಿ ನೀಡಿ.
–ಸ್ವರೂಪಾನಂದ ಎಂ. ಕೊಟ್ಟೂರು