Advertisement
ಡಾ. ಸಿಬಿಲ್ ಅವರು ವೈದ್ಯಕೀಯ ಪದವಿ ಪಡೆದಿದ್ದು ವಿದೇಶದಲ್ಲಿ. ನಂತರ ಒಳ್ಳೆಯ ಉದ್ಯೋಗವೂ ಸಿಕ್ಕಿತ್ತು. ಆದರೆ, ಅವರು ಅಲ್ಲಿ ಉಳಿಯಲಿಲ್ಲ. ತಾಯ್ನಾಡಿನ ರೋಗಿಗಳ ಸೇವೆಗಾಗಿ ಭಾರತಕ್ಕೆ ಮರಳಿದರು. ಈಗ ಬಡ ಕುಷ್ಠ ರೋಗಿಗಳ, ನೇತ್ರಹೀನರ, ಎಚ್‌ಐವಿ ಪೀಡಿತರ ಸೇವೆಯಲ್ಲಿ ತೊಡಗಿರುವ ಅವರು ಬರೀ ಡಾಕ್ಟರ್ ಅಲ್ಲ, ಎಲ್ಲರ ಪ್ರೀತಿಯ “ಡಾಕ್ಟರಮ್ಮ’ ಆಗಿದ್ದಾರೆ.
Related Articles
Advertisement
ರೋಗಿಗಳ ಮಕ್ಕಳಿಗೆ ಬೆಳಕು: ಈ ಸಮಾಜ ಕುಷ್ಠ ರೋಗಿಗಳನ್ನು ಅಸ್ಪೃಶ್ಯರೆಂದು ದೂರವಿಟ್ಟಿದೆ. ಆದರೆ, ತಂದೆ ಸ್ಥಾಪಿಸಿದ್ದ ನವಜೀವನ ಕೇಂದ್ರದ ಮೂಲಕ ಸಿಬಿಲ್ ಕುಷ್ಠ ರೋಗಿಗಳಿಗೆ ಪುಟ್ಟ ಬಡಾವಣೆ ಸ್ಥಾಪಿಸಿ, 50 ರೋಗಿಗಳ ಕುಟುಂಬಕ್ಕೆ ಮೂಲ ಸೌಕರ್ಯ ಒದಗಿಸಿದ್ದಾರೆ. ಜಿಲ್ಲೆ ಮಾತ್ರವಲ್ಲ ಆಂಧ್ರ, ಮಹಾರಾಷ್ಟ್ರದ ರೋಗಿಗಳೂ ಅಲ್ಲಿದ್ದಾರೆ. ವಾರಕ್ಕೊಮ್ಮೆ ಆಹಾರ ಸಾಮಗ್ರಿ, ಔಷಧ ನೀಡುತ್ತಾರೆ.
ವೈದ್ಯರೊಬ್ಬರು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡುತ್ತಾರೆ. ನೇತ್ರಾಸ್ಪತ್ರೆಯ ಲಾಭಾಂಶದಲ್ಲಿ ಅರ್ಧದಷ್ಟನ್ನು ಕುಷ್ಠ ರೋಗಿಗಳ ಶುಶ್ರೂಷೆಗಾಗಿ ಮೀಸಲಿಡಲಾಗಿದೆ. ಕುಷ್ಠ ರೋಗಿಗಳ 15ಕ್ಕೂ ಹೆಚ್ಚು ಮಕ್ಕಳ ಜವಾಬ್ದಾರಿ ಹೊತ್ತಿರುವ ಸಿಬಲ್, ಅವರಿಗೆ ಊಟ, ವಸತಿ ಜೊತೆಗೆ ಶಿಕ್ಷಣವನ್ನೂ ಕೊಡಿಸುತ್ತಿದ್ದಾರೆ. ಅವರಲ್ಲಿ ಕೆಲವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದು, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ವೈದ್ಯ ವೃತ್ತಿಯ ಜತೆಗೆ ಬಡವರ ಸೇವೆಯಿಂದ ಜೀವನದಲ್ಲಿ ಸಂತೃಪ್ತಿ ಸಿಗುತ್ತಿದೆ. ಹೆತ್ತವರ ಕನಸನ್ನು ನನಸಾಗಿಸುತ್ತಿದ್ದೇನೆಂಬ ಖುಷಿ ಇದೆ. ಪ್ರತಿಯೊಬ್ಬ ಮಹಿಳೆಯೂ ಉನ್ನತ ಶಿಕ್ಷಣ ಪಡೆದು ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ.-ಡಾ| ಸಿಬಿಲ್ ವಿಶ್ರಾಮಕರ್ * ಶಶಿಕಾಂತ ಬಂಬುಳಗೆ