Advertisement
ಉಕ್ರೇನಿನ ಎಲಿನಾ ಸ್ವಿಟೋಲಿನಾ 59ನೇ ಶ್ರೇಯಾಂಕಿತ ಜೆಕ್ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾ ವಿರುದ್ಧ ಮೊದಲ ಸೆಟ್‌ನಲ್ಲಿ ಆಘಾತಕ್ಕೊಳಗಾದರು. ಅಂತಿಮವಾಗಿ 4-6, 6-2, 6-1 ಅಂತರದಿಂದ ಗೆದ್ದು ದ್ವಿತೀಯ ಸುತ್ತು ದಾಟಿದರು. ಇವರಿಬ್ಬರ ನಡುವೆ 2 ಗಂಟೆ, 14 ನಿಮಿಷಗಳ ಕಾದಾಟ ನಡೆಯಿತು. ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಪ್ರಶಸ್ತಿಯೊಂದಿಗೆ ಇಲ್ಲಿಗೆ ಆಗಮಿಸಿದ ಸ್ವಿಟೋಲಿನಾ ತೃತೀಯ ಸುತ್ತಿನಲ್ಲಿ ತಮ್ಮದೇ ದೇಶದ 15ರ ಹರೆಯದ ಯುವ ಆಟಗಾರ್ತಿ ಮಾರ್ತಾ ಕೊಸ್ಟುéಕ್ ಸವಾಲನ್ನು ಎದುರಿಸಬೇಕಿದೆ.
Related Articles
ದ್ವಿತೀಯ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರ್ತಿ ಕ್ಯಾರೋಲಿನ್ ವೋಜ್ನಿಯಾಕಿ ಕ್ರೊವೇಶಿಯಾದ ಜಾನ್ ಪೆಟ್ ವಿರುದ್ಧ ಇನ್ನೇನು ಪೆಟ್ಟು ಅನುಭವಿಸುವುದರಲ್ಲಿದ್ದರು. 3ನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ 5-1ರ ಹಿನ್ನಡೆಗೆ ಸಿಲುಕಿ ಸೋತೇ ಹೋಗುವ ಸ್ಥಿತಿಯಲ್ಲಿದ್ದರು. ಆದರೆ ಅದೃಷ್ಟ ಗಟ್ಟಿ ಇತ್ತು. ಬಳಿಕ ಎದುರಾಳಿಗೆ ಒಂದೂ ಅಂಕ ಬಿಟ್ಟುಕೊಡದೆ ಗೆದ್ದು ನಿಟ್ಟುಸಿರೆಳೆದರು. ಅಂತರ 3-6, 6-2, 7-5. ವೋಜ್ನಿಯಾಕಿ ಅವರ ಮುಂದಿನ ಎದುರಾಳಿ ಹಾಲೆಂಡಿನ ಕಿಕಿ ಬೆರ್ಟೆನ್ಸ್. ದಿನದ ಇನ್ನೊಂದು ಪಂದ್ಯದಲ್ಲಿ ಬೆರ್ಟೆನ್ಸ್ ಅಮೆರಿಕದ ನಿಕೋಲೆ ಗಿಬ್ಸ್ ವಿರುದ್ಧ 7-6 (7-3), 6-0 ಅಂತರದ ಜಯ ದಾಖಲಿಸಿದರು.
Advertisement
ಒಸ್ಟಾಪೆಂಕೊ 3 ಸೆಟ್ ಹೋರಾಟಲಾತ್ವಿಯಾದ ಬಿಗ್ ಹಿಟ್ಟಿಂಗ್ ಖ್ಯಾತಿಯ ಜೆಲೆನಾ ಒಸ್ಟಾಪೆಂಕೊ ಕೂಡ ಗೆಲುವಿಗಾಗಿ 3 ಸೆಟ್‌ಗಳ ಹೋರಾಟ ನಡೆಸಬೇಕಾಯಿತು. ಚೀನದ ದುವಾನ್ ಯಿಂಗ್‌ಯಿಂಗ್ ವಿರುದ್ಧದ ಪಂದ್ಯವನ್ನು ಒಸ್ಟಾಪೆಂಕೊ 6-3, 3-6, 6-4 ಅಂತರದಿಂದ ಗೆದ್ದರು. ಒಸ್ಟಾಪೆಂಕೊ ಇನ್ನು ಎಸ್ತೋನಿಯಾದ ಅನೆಟ್ ಕೊಂಟಾವೀಟ್ ವಿರುದ್ಧ ಕಾದಾಡಬೇಕಿದೆ. ಕೊಂಟಾವೀಟ್ ಜರ್ಮನಿಯ ಮೋನಾ ಬಾರ್ತೆಲ್ ಅವರನ್ನು 6-3, 4-6, 6-3ರಿಂದ ಮಣಿಸಿದರು. ದ್ವಿತೀಯ ಸುತ್ತಿನ ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಅಲಿಜೆ ಕಾರ್ನೆಟ್ ಜರ್ಮನಿಯ 12ನೇ ಶ್ರೇಯಾಂಕಿತೆ ಜೂಲಿಯಾ ಜಾಜ್Õì ಅವರನ್ನು 6-4, 6-3ರಿಂದ; ಉಕ್ರೇನಿನ ಕ್ಯಾಥರಿನಾ ಬೊಂಡಾರೆಂಕೊ ರಷ್ಯಾದ 15ನೇ ಶ್ರೇಯಾಂಕಿತೆ ಅನಾಸ್ತಾಸಿಯಾ ಪಾವುÉಚೆಂಕೋವಾ ಅವರನ್ನು 6-2, 6-3ರಿಂದ; ಥಾಯ್ಲೆಂಡಿನ ಲುಕ್ಸಿಕಾ ಕುಂಖುಮ್ ಸ್ವಿಜರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್ ಅವರನ್ನು 6-1, 6-3ರಿಂದ ಪರಾಭವಗೊಳಿಸಿದರು. ಬೆಲಿಂಡಾ ಬೆನ್ಸಿಕ್ ಮೊದಲ ಸುತ್ತಿನಲ್ಲಿ ವೀನಸ್ ವಿಲಿಯಮ್ಸ್‌ಗೆ ಸೋಲುಣಿಸಿ ಸುದ್ದಿಯಾಗಿದ್ದರು. ನಡಾಲ್, ಸೋಂಗ 3ನೇ ಸುತ್ತಿಗೆ
ವಿಶ್ವದ ನಂಬರ್ ವನ್ ಟೆನಿಸಿಗ ಸ್ಪೇನಿನ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ 3ನೇ ಸುತ್ತಿಗೆ ಏರಿದ್ದಾರೆ. ಫ್ರಾನ್ಸ್‌ನ ದೈತ್ಯ ಟೆನಿಸಿಗ ಜೋ ವಿಲ್‌ಫ್ರೆಡ್ ಸೋಂಗ, ತವರಿನ ಭರವಸೆ ನಿಕ್ ಕಿರ್ಗಿಯೋಸ್ ಕೂಡ ದ್ವಿತೀಯ ಸುತ್ತು ದಾಟಿದ್ದಾರೆ. ರಫೆಲ್ ನಡಾಲ್ ಆರ್ಜೆಂಟೀನಾದ 52ನೇ ರ್‍ಯಾಂಕಿಂಗ್ ಆಟಗಾರ ಲಿಯೋನಾರ್ಡೊ ಮೇಯರ್ ಅವರನ್ನು 6-3, 6-4, 7-6 (7-4) ಅಂತರದಿಂದ ಹಿಮ್ಮೆಟ್ಟಿಸಿದರು. ಮುಂದಿನ ಸುತ್ತಿನಲ್ಲಿ ಬೋಸ್ನಿಯಾದ ದಮಿರ್ ಜುಮುರ್ ವಿರುದ್ಧ ಆಡಲಿದ್ದಾರೆ. ಜೋ ವಿಲ್‌ಫ್ರೆಡ್ ಸೋಂಗ 5 ಸೆಟ್‌ಗಳ ಮ್ಯಾರಥಾನ್ ಕಾದಾಟದ ಬಳಿಕ ಕೆನಡಾದ ಉದಯೋನ್ಮುಖ ಟೆನಿಸಿಗ ಡೆನ್ನಿಸ್ ಶಪವಲೋವ್ ಅವರನ್ನು 3-6, 6-3, 1-6, 7-6 (7-4), 7-5ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಸೋಂಗ ಅವರಿನ್ನು ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಸವಾಲನ್ನು ಎದುರಿಸಬೇಕಿದೆ. ಕಿರ್ಗಿಯೋಸ್ ಸರ್ಬಿಯಾದ ವಿಕ್ಟರ್ ಟ್ರೊಯಿಕಿ ವಿರುದ್ಧ 7-5, 6-4, 7-6 (2) ಅಂತರದಿಂದ ಜಯ ಸಾಧಿಸಿದರು. ಉಕ್ರೇನಿನ ಅಲೆಕ್ಸಾಂಡರ್ ಡೊಲ್ಗೊಪೊಲೋವ್, ಕ್ರೊವೇಶಿಯಾದ ಮರಿನ್ ಸಿಲಿಕ್, ಲಕ್ಸೆಂಬರ್ಗ್‌ನ ಗಿಲ್ಲೆಸ್ ಮುಲ್ಲರ್, ರಶ್ಯದ ಆಂಡ್ರೆ ರುಬ್ಲೇವ್ ತೃತೀಯ ಸುತ್ತು ಪ್ರವೇಶಿಸಿದವರಲ್ಲಿ ಪ್ರಮುಖರು.