Advertisement
ಜಿಲ್ಲೆಯಲ್ಲಿ ಈವರೆಗೆ 82 ಗ್ರಾಮಗಳ 237 ಜನವಸತಿ (ಹ್ಯಾಮ್ಲೆಟ್-ಮಜರೆ) ಪ್ರದೇಶಗಳ ಆಳತೆ ಕಾರ್ಯ ಪೂರ್ಣಗೊಂಡಿದ್ದು, ಇದರಲ್ಲಿ 10,748 ಆಸ್ತಿಗಳನ್ನು ಗುರುತಿಸಲಾಗಿದೆ. 118 ಜನವಸತಿ ಪ್ರದೇಶಗಳಲ್ಲಿ ಸ್ವಾಮಿತ್ವಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಆಸ್ತಿ ಮಾಲಕರಿಗೆ ಕರಡು ಕಾರ್ಡ್ ವಿತರಿಸಲಾಗುತ್ತಿದೆ. ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ರಚಿಸಿರುವ ಸಮಿತಿಯ ಮಾರ್ಗಸೂಚಿಗಳು (ಎಸ್‌ಒಪಿ) ಬಂದ ಬಳಿಕ ಶಾಶ್ವತ ಕಾರ್ಡ್ ವಿತರಣೆ ನಡೆಯಲಿದೆ.
ಪ್ರಸ್ತುತ ಮಳೆಗಾಲದ ಕಾರಣದಿಂದ ಸ್ಥಗಿತಗೊಂಡಿದ್ದ ಡ್ರೋನ್ ಸರ್ವೇ ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಡ್ರೋನ್ ಸರ್ವೇಗೆ ಮಳೆ, ಮೋಡ ಇರಬಾರದು. ವಾತಾವರಣದ ಉಷ್ಟಾಂಶ 27 ಸೆಂಟಿಗ್ರೇಡ್‌ಗಿಂತ ಜಾಸ್ತಿ ಇರಬೇಕು. ಇದನ್ನೂ ಓದಿ:ಆಯುಧ ಪೂಜೆಯಂದು ಸರ್ಕಾರಿ ಬಸ್ಸುಗಳ ಪೂಜೆಗೆ ಸಚಿವ ಶ್ರೀರಾಮುಲು ಸೂಚನೆ
Related Articles
Advertisement
ಸರ್ವೇ ನಂಬರ್ ಸಮಸ್ಯೆರಾಜ್ಯದಲ್ಲಿ ಈ ಹಿಂದೆ ಮದ್ರಾಸ್ ಪ್ರಾಂತಕ್ಕೆ ಒಳಪಟ್ಟಿದ್ದª ದ.ಕ., ಉಡುಪಿ ಜಿಲ್ಲೆಗಳಲ್ಲಿ ಭೂದಾಖಲೆಗಳು ಸರ್ವೇ ನಂಬರ್ ಸ್ವರೂಪದಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಗ್ರಾಮ ಠಾಣಾ ಸ್ವರೂಪದಲ್ಲಿದೆ. ಆದುದರಿಂದ ದ.ಕ. ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಯಡಿ ಭೂದಾಖಲೆಗಳು° ಸರಕಾರದಿಂದ ರಚಿಸಲಾಗಿರುವ ಸಮಿತಿ ಮಾರ್ಗ ಸೂಚಿಯನ್ವಯ ಸಿದ್ಧಗೊಳಿಸಲಾಗುತ್ತದೆ. 2022 ಮಾರ್ಚ್ ಸರ್ವೇಕಾರ್ಯ ಪೂರ್ಣ
ಮುಂದಿನ ವರ್ಷದ ಮಾರ್ಚ್‌ನೊಳಗೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮಾರ್ಕಿಂಗ್, ಡ್ರೋನ್ ಸರ್ವೇ ಕಾರ್ಯ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಕ್ಕೆ ಓರ್ವರಂತೆ ಸರ್ವೇಯರ್‌ಗಳನ್ನು ನೇಮಿಸಿ ಎಲ್ಲ ಪ್ರಕ್ರಿಯೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಪ್ರಸ್ತುತ ಪ್ರಕ್ರಿಯೆ ಪೂರ್ಣಗೊಂಡಿರುವ ಆಸ್ತಿಗಳ ಕರಡು ಪ್ರಾಪರ್ಟಿ ಕಾರ್ಡ್ ವಿತರಿಸಲಾಗುತ್ತಿದ್ದು, ಸರಕಾರದ ಎಸ್‌ಒಪಿ ಬಂದ ಬಳಿಕ ಅಂತಿಮ ಕಾರ್ಡ್ ನೀಡಲಾಗುವುದು.
-ನಿರಂಜನ್, ಭೂಮಾಪನ ಇಲಾಖೆಯ ಉಪ ನಿರ್ದೇಶಕರು