ಬೆಂಗಳೂರು: ಜಪಾನ್ ಮೂಲದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರç ಲಿ. (ಎಸ್‌ಎಂಐಪಿಎಲ್), ಕರ್ನಾಟಕದ ಬೈಕ್ ಪ್ರೇಮಿಗಳಿಗೆ ಅತ್ಯಂತ ನಿರೀಕ್ಷೆಯ ಕ್ರೀಡಾ ಪ್ರವಾಸದ ಮೋಟಾರು ಸೈಕಲ್ ಜಿಕ್ಸರ್ ಎಸ್‌ಎಫ್250 ಹಾಗೂ ಜಿಕ್ಸರ್ ಎಸ್‌ಎಫ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹೊಸ ಉತ್ಪನ್ನಗಳ ಬಿಡುಗಡೆಯ ಬಗ್ಗೆ ಎಸ್‌ಎಂಐಪಿಎಲ್ ಕಂಪನಿ ಮುಖ್ಯಸ್ಥ ಕೋಯಿcರೋ ಹಿರಾವೊ ಮಾತನಾಡಿ, ಭಾರತೀಯ ಮಾರುಕಟ್ಟೆಗೆ ಪ್ರೀಮಿಯಂ ಬೈಕ್ ವರ್ಗದಲ್ಲಿ ಸುಜುಕಿ ಜಿಕ್ಸರ್ ಎಸ್‌ಎಫ್ ಸರಣಿ ಬಿಡುಗಡೆ ಮಾಡುತ್ತಿರುವುದಕ್ಕೆ ಅತ್ಯಂತ ಸಂತೋಷ ಉಂಟಾಗುತ್ತಿದೆ. ಜಿಕ್ಸರ್-ಎಸ್‌ಎಫ್ ಕ್ರೀಡಾ ಮನೋಭಾವದ ಉತ್ಸಾಹಿ ಸವಾರರ ಹೃದಯವನ್ನು ಗೆಲ್ಲಲು ಬಂದಿದೆ ಎಂದರು.
ಎಸ್‌ಎಂಐಪಿಎಲ್ ಉಪಾಧ್ಯಕ್ಷ ದೇವಶೀಶ್ ಹಾಂಡಾ, ಭಾರತವು ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯು ಪ್ರೀಮಿಯಂ ಉತ್ಪನ್ನಗಳನ್ನು ಅದರಲ್ಲೂ ವಿಶೇಷವಾಗಿ 200ಸಿಸಿ ಮೇಲ್ಪಟ್ಟ ಇಂಜಿನ್ ಡಿಸ್ಪೆಸ್ಮೆಂಟ್ ಇರುವ ಉತ್ಪನ್ನಗಳನ್ನು ಕೇಳಲಾರಂಭಿಸಿದೆ. ಜಿಕ್ಸರ್ ಎಸ್‌ಎಫ್-250, 249ಸಿಸಿ ಸುಜುಕಿ ಆಯಿಲ್ ಕೂಲಿಂಗ್ ಸಿಸ್ಟಮ್, ಚಾಲಿತ ಫೊರ್ ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಫುಯೆಲ್ ಇಂಜೆಕ್ಷನ್ ಇಂಜಿನ್‌ನ ಶಕ್ತಿ ಹೊಂದಿದೆ.
ಈ ಆಧುನಿಕ ಇಂಜಿನ್ 9000ಆರ್‌ಪಿಎಂ ಮತ್ತು 7500ಆರ್‌ಪಿಎಂ ಉತ್ಪಾದಿಸುತ್ತದೆ. ಸಿಕ್ಸ್ ಸೀ³ಡ್ ಗೇರ್ ಬಾಕ್ಸ್ ಕಡಿಮೆಯಿಂದ ಮಧ್ಯಮ ವೇಗದಲ್ಲೂ ಸರಾಗವಾದ ಸವಾರಿ ಒದಗಿಸುತ್ತದೆ. ಎಸ್‌ಒಸಿಎಸ್ ತಂತ್ರಜ್ಞಾನ, ಅಗಲವಾದ ಟಯರ್‌ಗಳು ಇದಕ್ಕಿವೆ. ಹೊಸ ಡ್ಯುಯಲ್ ಚಾನಲ್ ಆ್ಯಂಟಿ-ಲಾಕ್ ಬ್ರೇಕ್ ಸಿಸ್ಟಮ್ ಸುಧಾರಿತ ಬ್ರೇಕಿಂಗ್ ಖಾತರಿಪಡಿಸುತ್ತದೆ ಎಂದು ವಿವರಿಸಿದರು.
ಅದೇ ರೀತಿ ಹೊಸ ಜಿಕ್ಸರ್-ಎಸ್‌ಎಫ್ ಕೇಂದ್ರಿತ ಮೋಟಾರು ಸೈಕಲ್ ಆಗಿದ್ದು, 155ಸಿಸಿ ಸುಜುಕಿ ಆಯಿಲ್ ಕೂಲಿಂಗ್ ಸಿಸ್ಟಮ್ ಚಾಲಿತ ಫೊರ್ ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಫುಯೆಲ್ ಇಂಜೆಕ್ಷನ್ ಇಂಜಿನ್ ಹೊಂದಿದೆ. ಇದರ ಎಸ್‌ಇಪಿ ತಂತ್ರಜ್ಞಾನವು 8000 ಮತ್ತು 6000ಆರ್‌ಪಿಎಂ ಒದಗಿಸುತ್ತದೆ. ಐರೋಪ್ಯ ಸ್ಟೈಲಿಂಗ್ ಅಂಶಗಳು ಹಾಗೂ ತೆಳುವಾದ ಎಲ್‌ಇಡಿ ಹೆಡ್‌ಲೈಟನ್ನು ಹೊಂದಿವೆ. ಜಿಕ್ಸರ್ ಎಸ್‌ಎಫ್-250 ಬೆಲೆ 1,70,655 ರೂ. ಹಾಗೂ ಜಿಕ್ಸರ್-ಎಸ್‌ಎಫ್ ದರ 1,09,870 ರೂ. (ಬೆಂಗಳೂರು ಎಕ್ಸ್‌ಶೋರೂಂ) ಆಗಿದೆ.