ಬೆಂಗಳೂರು: ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈ.ಲಿ., (ಎಸ್‌ಎಂಸಿಐ) ತನ್ನ ಮೊದಲ ಸಬ್-100ಸಿಸಿಯ ದೊಡ್ಡ ಬೈಕ್ ಜಿಎಸ್‌ಎಕ್ಸ್-ಎಸ್750 ಅನ್ನು ಇಂಡಿಯಾ ನ್ಪೋರ್ಟಿಂಗ್‌ನಲ್ಲಿ ಪರಿಚಯಿಸಿದೆ. ಜಿಎಸ್‌ಎಕ್ಸ್-ಎಸ್750 ಹಯಬುಸಾ ನಂತರ ಸುಜುಕಿ ತಯಾರಿಸಿದ ಎರಡನೇ ಅತಿ ದೊಡ್ಡ ಬೈಕ್ ಆಗಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಡಿ ತಯಾರಿಸಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಾತೋಷಿ ಉಚಿದಾ ಮಾತನಾಡಿ, ಪ್ರತಿ ವರ್ಷ ಭಾರತೀಯ ಮಾರುಕಟ್ಟೆಗೆ ಹೊಸ ಮತ್ತು ಪ್ರೀಮಿಯಂ ಉತ್ಪನ್ನಗಳನ್ನು ಪರಿಚಯಿಸಬೇಕೆಂಬ ಯೋಜನೆ ಹೊಂದಿದ್ದೇವೆ. ಅದರ ಪ್ರಕಾರ ಸಿಕೆಡಿ ಮಾಡೆಲ್‌ನ ಜಿಎಸ್‌ಎಕ್ಸ್-ಎಸ್750 ಈ ವರ್ಷದಲ್ಲಿ ನೀಡುತ್ತಿರುವ ಮೊದಲ ಕೊಡುಗೆಯಾಗಿದೆ. ಅಷ್ಟೇ ಮಾತ್ರವಲ್ಲದೆ, ಸಬ್-100ಸಿಸಿ ದೊಡ್ಡ ಬೈಕ್ ಶ್ರೇಣಿಯಲ್ಲಿ ನಮ್ಮ ಮೊಟ್ಟ ಮೊದಲ ಉತ್ಪಾದನೆ ಇದಾಗಿದೆ ಎಂದರು.
ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಜೀವ್ ರಾಜಶೇಖರನ್ ಮಾತನಾಡಿ, ಎಸ್‌ಎಂಸಿಐ ಜಿಎಸ್‌ಎಕ್ಸ್-ಆರ್ ಸೆಗೆ¾ಂಟ್‌ನಲ್ಲಿ ಶ್ರೇಷ್ಠ ಬೈಕ್ ನೀಡುವುದರಲ್ಲಿ ಜನಪ್ರಿಯವಾಗಿದ್ದು ಜಿಎಸ್‌ಎಕ್ಸ್-ಎಸ್750 ಕೂಡ ಅವುಗಳಲ್ಲೊಂದು. ಸಿಕ್ಸ್-ಸೀಡ್ ಗೇರ್ ಬಾಕ್ಸ್, ಇನ್‌ಲೈನ್ 4 ಸಿಲಿಂಡರ್, 4 ಸ್ಟೋಕ್, ಡಿಒಎಚ್‌ಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಇದಕ್ಕಿದ್ದು ಬೈಕ್ ಸವಾರರಿಗೆ ಅದ್ಭುತ ಅನುಭವ ನೀಡಲೆಂದೇ ರೂಪಿಸಲಾಗಿದೆ.
ಇದರ ಎಂಜಿನ್ 84ಕೆಡಬು 10,500ಆರ್‌ಪಿಎಂ ಮತ್ತು 81ಎನ್‌ಎಂ 9,000ಆರ್‌ಪಿಎಂ ಶಕ್ತಿ ಉತ್ಪಾದಿಸುತ್ತದೆ. ಆದ್ದರಿಂದ ಇದು ಏಪೆಕ್ಸ್ ಪ್ರಿಡೆಟರ್ ಆಗಿ ಹೊರಹೊಮ್ಮಿದೆ. ಬೈಕ್‌ನ ತೀ-ಮೋಡ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಹಿಂದಿನ ಚಕ್ರದ ತಿರುಗುವಿಕೆಯನ್ನು ತಡೆಯಲು ಎಂಜಿನ್ ಮೇಲೆ ಉತ್ತಮ ಕಂಟ್ರೋಲ್ ಇಡಲಿದೆ.
ಕಾಂಪ್ಯಾಕ್ಟ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ (ಎಬಿಎಸ್) ಬೈಕ್ ಮೇಲೆ ಬೀಳುವ ತೂಕವನ್ನು ನಿರ್ವಹಿಸುವುದರ ಜೊತೆ ರಸ್ತೆ ಮೇಲೆ ನಿಯಂತ್ರಣ ತಪ್ಪದಂತೆ ಹಿಡಿತವಿಟ್ಟುಕೊಳ್ಳುತ್ತದೆ. ಮೆಟಾಲಿಕ್ ಟ್ರೈಟನ್ ಬ್ಲೂ, ಗ್ಲಾಸ್ ಸ್ಪಾರ್ಕಲ್ ಬ್ಲಾಕ್ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲಾಕ್, ಕ್ಯಾಂಡಿ ಡೇರಿಂಗ್ ರೆಡ್ ಬಣ್ಣಗಳಲ್ಲಿ ಬೈಕ್ ಲಭ್ಯ. ಇದರ ದೆಹಲಿ ಎಕ್ಸ್‌ಶೋರೂಂ ಬೆಲೆ 7,45,000 ರೂ. ಎಂದು ಅವರು ವಿವರಿಸಿದರು.