ನವದೆಹಲಿ: ಭಾರತದ ‘ವಿಂಡ್ ಮ್ಯಾನ್ ‘ ಎಂದು ಜನಪ್ರಿಯರಾಗಿದ್ದ ಸುಜ್ಲಾನ್ ಎನರ್ಜಿ ಸಂಸ್ಥಾಪಕ ತುಳಸಿ ತಂತಿ ಅವರು ಶನಿವಾರ ಸಂಜೆ ಹೃದಯ ಸ್ತಂಭನದಿಂದ ನಿಧನ ಹೊಂದಿದ್ದಾರೆ ಎಂದು ಕಂಪನಿ ತಿಳಿಸಿದೆ.ಅವರಿಗೆ 64 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ: ಭಾರತ ಮತ್ತು ತೈವಾನ್‌ಗಳು ಸರ್ವಾಧಿಕಾರದ ಬೆದರಿಕೆಗೆ ಒಳಗಾಗಿವೆ: ತೈಪೆಯ ರಾಯಭಾರಿ
ಭಾರತದಲ್ಲಿ ಪವನ ಶಕ್ತಿ ವ್ಯವಹಾರದ ಪ್ರವರ್ತಕರಲ್ಲಿ ಒಬ್ಬರಾಗಿ, ಕ್ಲೀನ್ ಎನರ್ಜಿಯಲ್ಲಿ ಜಾಗತಿಕವಾಗಿ ಹೆಸರಾಂತ ಪರಿಣಿತರಾದ ತಂತಿ ಅವರು 1995 ರಲ್ಲಿ ಜಾಗತಿಕ ಪವನ ಶಕ್ತಿ ಮಾರುಕಟ್ಟೆಯು ಅಂತಾರಾಷ್ಟ್ರೀಯ ಪ್ರಾಬಲ್ಯ ಹೊಂದಿದ್ದಾಗ ನವೀಕರಿಸಬಹುದಾದ ಇಂಧನ ಉದ್ಯಮದಲ್ಲಿ ಅವಕಾಶವನ್ನು ಕಲ್ಪಿಸಿಕೊಂಡಿದ್ದರು.
ತಂತಿ ಅವರ ನಾಯಕತ್ವದಲ್ಲಿ, ಸುಜ್ಲಾನ್ ಎನರ್ಜಿಯು 19.4 ಗಿಗಾವ್ಯಾಟ್‌ಗಳ (GW) ಸಂಚಿತ ಸ್ಥಾಪಿತ ಸಾಮರ್ಥ್ಯ, ಭಾರತದಲ್ಲಿ 33 ಪ್ರತಿಶತ ಮಾರುಕಟ್ಟೆ ಪಾಲು ಮತ್ತು 17 ದೇಶಗಳಲ್ಲಿ ಅಸ್ತಿತ್ವದೊಂದಿಗೆ ದೇಶದ ಅತಿದೊಡ್ಡ ಪವನ ಶಕ್ತಿ ಸಂಸ್ಥೆಯಾಗಿ ಬೆಳೆಯಿತು.
ತಂತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, ” ತುಳಸಿ ತಂತಿ ಅವರು ಭಾರತದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದ ಪ್ರವರ್ತಕ ವ್ಯಾಪಾರ ನಾಯಕರಾಗಿದ್ದರು ಮತ್ತಷ್ಟು ಸುಸ್ಥಿರ ಅಭಿವೃದ್ಧಿಗೆ ನಮ್ಮ ರಾಷ್ಟ್ರದ ಪ್ರಯತ್ನಗಳನ್ನು ಬಲಪಡಿಸಿದರು. ಅವರ ಅಕಾಲಿಕ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.