Advertisement

ನಾಯಕ ಸುಯೋಧನ 

12:10 AM Jan 19, 2019 | |

ಸಂಧ್ಯಾ ಕಲಾವಿದರು ಹವ್ಯಾಸಿ ನಾಟಕ ತಂಡದ ಹೊಸ ಆಯಾಮದ ವಿಶಿಷ್ಟ ನಾಟಕ “ಸುಯೋಧನ’ ಇದೀಗ 113ನೇ ಪ್ರದರ್ಶನವನ್ನು ಕಾಣುತ್ತಿದೆ. ಇದುವರೆಗೂ ಮಹಾಭಾರತದ ಕಥೆಗಳು ಅನೇಕ ರೂಪದಲ್ಲಿ ಮೂಡಿಬಂದಿವೆ ಎನ್ನುವು ದೇನೋ ನಿಜ. ಅವೆಲ್ಲದರ ನಡುವೆ ಈ ನಾಟಕ ವಿಭಿನ್ನವಾಗಿ ಕಾಣುವುದಕ್ಕೆ ಕಾರಣ, ಇಲ್ಲಿ ದುರ್ಯೋಧನ ನಾಯಕನಾಗಿರುವುದು. ಮಹಾಕಾವ್ಯದ ಪ್ರತಿಯೊಂದು ಪಾತ್ರ-ಘಟನೆಗಳನ್ನು ಅವನು ತನ್ನದೇ ದೃಷ್ಟಿಯಲ್ಲಿ ಪರಾಂಬರಿಸುತ್ತ ಪ್ರಶ್ನಿಸುತ್ತಾನೆ. ತನ್ನ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತಾನೆ. ಇಲ್ಲಿಯ ರಾಜಕಾರಣದಲ್ಲಿ ಕಂಡು ಬರುವ ಕೃಷ್ಣನ ಕಪಟ, ಶಕುನಿಯ ಕುತಂತ್ರ, ಸುಯೋಧನನ ಛಲ ಎಲ್ಲವೂ ಸಮರ್ಥಿಸಿಕೊಳ್ಳಲ್ಪಡುತ್ತವೆ. ರಾಜಕೀಯ ಒಳಸುಳಿಗಳಿರುವುದರಿಂದ ನಾಟಕ ಪ್ರಸ್ತುತತೆಯನ್ನು ಪಡೆಯುತ್ತದೆ. ನಾಟಕವನ್ನು ಹಿರಿಯ ರಂಗಕರ್ಮಿ ಎಸ್‌. ವಿ. ಕೃಷ್ಣ ಶರ್ಮ ರಚಿಸಿ ನಿರ್ದೇಶಿಸಿದ್ದಾರೆ.

Advertisement

ಎಲ್ಲಿ?: ಸೇವಾಸದನ, ಮಲ್ಲೇಶ್ವರ | ಯಾವಾಗ?: ಜ. 19. ಸಂಜೆ 7

Advertisement

Udayavani is now on Telegram. Click here to join our channel and stay updated with the latest news.

Next