Advertisement
ಈ ಜಾಗ ಪಂ. ಅಧೀನದಲ್ಲಿದ್ದು, ಅಭಿವೃದ್ಧಿಯತ್ತ ಗಮನ ಹರಿಸಿದಲ್ಲಿ ಆಕರ್ಷಕ ಪ್ರವಾಸಿ ಕ್ಷೇತ್ರವಾಗಬಹುದು.
ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿ ಎಣ್ಣೆಹೊಳೆಯ ಹಚ್ಚ ಹಸುರಿನ ಮಧ್ಯೆ ಈ ಪ್ರದೇಶವಿದೆ. ಜತೆಗೆ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದೆ. ಈ ಮಾರ್ಗವಾಗಿಯೇ ಶಿವಮೊಗ್ಗ, ಧರ್ಮಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಎಣ್ಣೆಹೊಳೆಯಲ್ಲಿ ಉದ್ಯಾನವನ ನಿರ್ಮಿಸಿದಲ್ಲಿ ಈ ಪ್ರದೇಶವನ್ನೂ ಪ್ರವಾಸಿ ಕೇಂದ್ರವನ್ನಾಗಿಸಬಹುದಾಗಿದೆ. ಪಾಳುಬಿದ್ದ ಜಾಗ
ಈಗ ಪಾಳು ಬಿದ್ದಿರುವ ನದಿ ತಟದಲ್ಲಿ ಕಸಕಡ್ಡಿ ತ್ಯಾಜ್ಯಗಳೇ ತುಂಬಿವೆೆ. ಉದ್ಯಾನವನ ನಿರ್ಮಿಸಿದಲ್ಲಿ ಸ್ವತ್ಛತೆ ಕಾಪಾಡುವ ಜತೆಗೆ ಪರಿಸರವನ್ನು ಆಕರ್ಷಣೀಯಗೊಳಿಸಬಹುದಾಗಿದೆ.ಉದ್ಯಾನವನ ನಿರ್ಮಾಣ
ಸ್ಥಳೀಯ ದಾನಿಗಳು, ಗ್ರಾಮಸ್ಥರು, ಸರಕಾರದ ಅನುದಾನ ಸೇರಿಸಿ ಸುಂದರ ಉದ್ಯಾನವನ ಎಣ್ಣೆಹೊಳೆಯಲ್ಲಿ ಹಾಗೂ ತಾಲೂಕಿನ 3-4 ಕಡೆಗಳಲ್ಲಿ ನಿರ್ಮಾಣ ಮಾಡುವ ಕನಸಿದ್ದು ಈ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮದ ಹಿರಿಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
-ಸುನಿಲ್ ಕುಮಾರ್, ಶಾಸಕರು, ಕಾರ್ಕಳ
Related Articles
ನದಿ ತಟದಲ್ಲಿ ಉದ್ಯಾನವನ, ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಬಯಲು ರಂಗಮಂದಿರ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಂಡು ಶಾಸಕ ಸುನಿಲ್ ಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನದ ಭರವಸೆ ನೀಡಿದ್ದಾರೆ.
-ಗೌತಮ್ ನಾಯಕ್, ಸ್ಥಳೀಯ ಪಂಚಾಯತ್ ಸದಸ್ಯರು, ಮರ್ಣೆ
Advertisement