Advertisement
ಭಗವದ್ಭಕ್ತರ ಕೊಡುಗೆಗಳಿಂದಾಗಿ ಸುವರ್ಣ ಗೋಪುರ ಸಮರ್ಪಣೆಯಾಗಿದೆ. ಶೇ. 20ರಷ್ಟು ಮಾತ್ರ ಕೆಲಸ ಬಾಕಿ ಇದ್ದು ಇದು ಇನ್ನಾರು ತಿಂಗಳಲ್ಲಿ ಮುಗಿಯಲಿದೆ ಎಂದು ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.
ಸುವರ್ಣ ಗೋಪುರ ನಿರ್ಮಾಣ ಸಂದರ್ಭ ದೇಶದ ಶಿರಭಾಗವೆನಿಸಿದ ಕಾಶ್ಮೀರ ಭೂಭಾಗದ ಸಮಸ್ಯೆಯೂ ಬಗೆಹರಿಯಲಿ. ಅಮೃತಸರದ ಸ್ವರ್ಣ ಮಂದಿರದಂತೆ ಜಗತ್ತಿನ ವಿವಿಧೆಡೆ ಇರುವವರಿಗೆ ಉಡುಪಿಯ ಸ್ವರ್ಣಗೋಪುರ ಗುರುತಿಸುವಂತಾಗಲಿ ಎಂದು ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾರೈಸಿದರು. ದೇವರು ಎಲ್ಲವನ್ನೂ ಒಳ್ಳೆಯದಕ್ಕಾಗಿ ಮಾಡಿಸುತ್ತಾನೆ. ಏಳು ಕಡೆ ಗೋಪುರ ನಿರ್ಮಿಸಿಕೊಂಡ ಭಗವಂತ ಇನ್ನೊಂದು ಕಡೆಯೂ ಮಾಡಿಸಿಕೊಳ್ಳುತ್ತಾನೆಂದು ಶ್ರೀ ಪಲಿಮಾರು ಮಠದ ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹೇಳಿದರು.
Related Articles
Advertisement
ಸಮ್ಮಾನಸರ್ವಜ್ಞ ಪೀಠದ ಸಿಂಹಾಸನದಲ್ಲಿ ದಾರು ಶಿಲ್ಪ ರಚಿಸಿದ ಸಂದೀಪ್, ನಾಗರಾಜ್, ಅಖಂಡ ಭಜನೆಯ ಸಂಯೋಜಕ ಕಂಪ್ಲಿ ಗುರುರಾಜ ಆಚಾರ್ಯ, ಗೀತಾ ಗುರುರಾಜ ಆಚಾರ್ಯ, ಗುಲ್ಬರ್ಗದ ಸರಸ್ವತೀ ತಂತ್ರಿ, ಹೊನ್ನಾವರದ ರಾಘವೇಂದ್ರ ಭಟ್ ಅವರನ್ನು ಸಮ್ಮಾನಿಸಲಾಯಿತು. ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.