ಭೋಪಾಲ್: ಬಸ್ ಮತ್ತು ಎಸ್ ಯುವಿ ನಡುವೆ ನಡೆದ ಭೀಕರ ಅಪಘಾತದಲ್ಲಿ 11 ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಬೆತುಲ್ ನಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, 11 ಕಾರ್ಮಿಕರು ಮಹಾರಾಷ್ಟ್ರದ ಅಮರಾವತಿಯಿಂದ ಹಿಂತಿರುಗುತ್ತಿದ್ದರು. ಗುಡ್ಗಾಂವ್ ಮತ್ತು ಭೈಸ್ದೇಹಿ ನಡುವಿನ ಜಲ್ಲಾರ್ ಪೊಲೀಸ್ ಠಾಣೆ ಬಳಿ ಮುಂಜಾನೆ ಎರಡು ಗಂಟೆಗೆ ಅಪಘಾತ ಸಂಭವಿಸಿದೆ. ಎಸ್ ಯುವಿ ಚಾಲಕ ನಿದ್ರೆಗೆ ಜಾರಿದ್ದರಿಂದ ಘಟನೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ತುಮಕೂರು ಬಾಣಂತಿ- ಮಕ್ಕಳ ಸಾವಿನ ಪ್ರಕರಣ: ನಾಲ್ವರ ಅಮಾನತು, ಕ್ರಿಮಿನಲ್ ಮೊಕದ್ದಮೆಗೆ ಸೂಚನೆ
ಏಳು ಶವಗಳನ್ನು ತಕ್ಷಣವೇ ಹೊರತೆಗೆಯಲಾಯಿತು ಆದರೆ ಉಳಿದ ದೇಹಗಳನ್ನು ಹೊರತೆಗೆಯಲು ಕಷ್ಟಪಡಬೇಕಾಯಿತು ಎಂದು ಬೆತುಲ್ ಹಿರಿಯ ಪೊಲೀಸ್ ಅಧಿಕಾರಿ ಸಿಮಲಾ ಪ್ರಸಾದ್ ಹೇಳಿದ್ದಾರೆ.
ಅಪಘಾತಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.