ಚನ್ನರಾಯಪಟ್ಟಣ: ಸುತ್ತೂರು ಮಠವು ಶಿಕ್ಷಣ, ಉಚಿತ ಆರೋಗ್ಯ ತಪಾಸಣೆ, ಸಮೂಹಿಕ ವಿಹಾಹಗಳು ಸೇರಿದಂತೆ ವಿವಿಧ ಲೋಕ ಕಲ್ಯಾಣ ಕಾರ್ಯಗಳನ್ನು ಮಾಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಜ.13 ರಿಂದ 18ರ ವರೆಗೆ ನಡೆಯಲಿರುವ ಆದಿ ಜಗದ್ಗುರು ಶ್ರೀಶಿವರಾರತ್ರೀಶ್ವರ ಶಿವಯೋಗಿಗಳ ಸುತ್ತೂರು ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಕೈಗೊಂಡ ಪ್ರಚಾರ ರಥಕ್ಕೆ ನುಗ್ಗೇಹಳ್ಳಿಯಲ್ಲಿ ಸ್ವಾಗತ ಕೋರಿ ಪೂಜೆ ಸಲ್ಲಿಸಿ ಮಾತನಾಡಿ, ಲಕ್ಷಾಂತರ ಮಕ್ಕಳಿಗೆ ಊಟ, ವಸತಿ, ವಿದ್ಯಾದಾನ ನೀಡಿದ ಹೆಗ್ಗಳಿಕೆ ಸುತ್ತೂರು ಮಠಕ್ಕೆ ಸಲ್ಲುತ್ತದೆ.
ಜ.13ರಂದು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ 14ರ ಭಾನುವಾರ ಸಾಮೂಹಿಕ ವಿಹಾಹ 15ರ ಸೋಮವಾರ ರಥೋತ್ಸವ 16ರ ಮಂಗಳವಾರ ಲಕ್ಷದೀಪೋತ್ಸವ 17ರಂದು ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು ಭಾಗವಹಿಸುತ್ತಾರೆ ಎಂದರು.
ವಿಷೇಶ ವಸ್ತು ಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ರಂಗೋಲಿ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಸೋಬಾನೆ ಪದ ಸ್ಪರ್ಧೆಗಳು° ಏರ್ಪಡಿಸುವ ಮೂಲಕ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ದೇಶಕ್ಕೆ ಇವರ ಕೊಡುಗೆ ಅಪಾರವಾದುದ್ದು ಪ್ರಚಾರ ರಥವು 15 ದಿನಗಳಿಂದ ರಾಜ್ಯದಲ್ಲಿ ಸಂಚರಿಸುತ್ತಿದ್ದು ಜಾತ್ರೆಗೆ ಸ್ವಾಗತ ಕೋರುತ್ತಿದೆ.
ಎಲ್ಲರೂ ಸುತ್ತೂರ ಜಾತ್ರೆಯಲ್ಲಿ ಭಾಗವಹಿಸಿ ಸುತ್ತೂರ ಶ್ರೀಗಳ ಕೃಪೆಗೆ ಪಾತ್ರರಾಗಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಎನ್.ಎನ್.ಪುಟ್ಟಸ್ವಾಮಿ, ಅಶೋಕ್, ಎನ್.ಟಿ.ಸಿದ್ದಪ್ಪ, ಮಹದೇವ್‌ಸ್ವಾಮಿ, ಗುರುಲಿಂಗಪ್ಪ, ಕುಮಾರ್, ಪಂಚಾಕ್ಷರಿ, ಬಸವರಾಜು, ಎನ್.ಆರ್.ಮಹೇಶ್, ಎನ್.ಡಿ.ಗೌತಮ್, ಎನ್.ಸಿ.ವಿಶ್ವನಾಥ್, ಎನ್.ಎಸ್.ಪ್ರಮೋದ್, ಗುರುಪ್ರಸಾದ್, ಆನಂದ್, ಪ್ರದೀಪ್, ನಟೇಶ್, ಮುನ್ನಪಟೇಲ್, ಗ್ರಾಮಸ್ಥರು ಹಾಜರಿದ್ದರು.