Advertisement

ಸುತ್ತೂರು ಮಠ ಧರ್ಮ-ಜ್ಞಾನಗಳ ಸಂಗಮ ಕೇಂದ್ರ

11:41 AM Jun 27, 2017 | |

ಮೈಸೂರು: ಮನಸ್ಸಿನ ಚಂಚಲತೆಗಳಿಂದ ಬಿಡುಗಡೆಗೊಂಡು ಸ್ವಸ್ಥ ದೇಹ, ಸ್ವಸ್ಥ ಮನಸ್ಸು, ಶಾಂತಿ-ನೆಮ್ಮದಿಗಳಿಂದಿರಲು ಯೋಗ ಅವಶ್ಯಕ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದರು. ಅಮೆರಿಕಾದ ಮೆರಿಲ್ಯಾಂಡ್‌ನ‌ ಜೆ ಎಸ್ ಎಸ್ ಸ್ಟಿ ರುಚ್ಯುಯಲ್ ಮಿಷನ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

Advertisement

ಯೋಗದಿಂದ ಇಂದು ಭಾರತದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಸರಳವಾದ ಆಸನಗಳು ಉತ್ತಮ ಆರೋಗ್ಯಕ್ಕೆ ಅತ್ಯಂತ ಸಹಕಾರಿ. ಪ್ರತಿಯೊಬ್ಬರೂ ಯೋಗಾಸಕ್ತರಾಗಬೇಕು. ಪ್ರಾಣಾಯಾಮವನ್ನು ಎಲ್ಲರೂ ಮಾಡಲು ಸಾಧ್ಯವಿದೆ. ಆಸನಗಳಿಂದ ಹೇಗೆ ವಿವಿಧ ಕಾಯಿಲೆಗಳನ್ನು ಗುಣಪಡಿಸಿ ಕೊಳ್ಳುವುದು ಸಾಧ್ಯವಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ಮನುಷ್ಯನಿಗೆ ಸಂಪಾದನೆ ಎಷ್ಟು ಮುಖ್ಯವೋ ಹಾಗೆಯೇ ದಾನ-ಧರ್ಮ ಕಾರ್ಯಗಳಿಗೂ ಗಳಿಸಿದ್ದರಲ್ಲಿ ಶೇ.10ರಷ್ಟನ್ನು ವಿನಿಯೋಗಿಸುವುದು ಉತ್ತಮ. ಪತಂಜಲಿ ಯೋಗಸಂಸ್ಥೆ ಸಾವಿರಾರು ಕೋಟಿ ರೂ. ಲಾಭಗಳಿಸುತ್ತಿದ್ದು ಅದನ್ನು ಸಮಾಜ-ಧಾರ್ಮಿಕ ಸತ್ಕಾರ್ಯಗಳಿಗೆ ಸದ್ವಿನಿಯೋಗ ಮಾಡುತ್ತಿದೆ ಎಂದರು.

ಶ್ರೀ ಸುತ್ತೂರು ಮಠ ಧರ್ಮ-ಜ್ಞಾನಗಳ ಸಂಗಮ ಕೇಂದ್ರವಾಗಿದೆ. ಮಠ ಲಕ್ಷಾಂತರ ಜನರಿಗೆ ಜ್ಞಾನದಾನ ನೀಡುತ್ತಿದೆ. ಅಮೆರಿಕಾದ ಮೆರಿಲ್ಯಾಂಡ್‌ನ‌ ಈ ಪ್ರಶಾಂತ ಪರಿಸರದಲ್ಲಿ ಜೆ ಎಸ್ ಎಸ್ ಸ್ಟಿ ರುಚ್ಯುಯಲ್ ಮಿಷನ್‌ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಮುಂದೆಯೂ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಸಾರ್ವಜನಿಕರು ಇದಕ್ಕೆಲ್ಲ ಸಹಕರಿಸಬೇಕು ಎಂದು ಹೇಳಿದರು.

ಸುತ್ತೂರು ಮಠಾಧೀಶ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಯೋಗ ಭಾರತ ಜಗತ್ತಿಗೆ ನೀಡಿದ ಅಪೂರ್ವವಾದ ಕಾಣಿಕೆಗಳಲ್ಲಿ ಒಂದು. ಯೋಗ ಸಾಧನೆಯ ಮೂಲಕ ಜೀವನ ಶೈಲಿ ಬದಲಿಸಿಕೊಂಡು ಉತ್ತಮ ಜೀವನ ಸಾಗಿಸಿದರೆ ಭಗವತ್‌ ಸಾûಾತ್ಕಾರ ಸಾಧ್ಯ. ಭಾರತದ ಪ್ರಾಚೀನವಾದ ಈ ಯೋಗಕ್ಕೆ ಪತಂಜಲಿ ಮಹರ್ಷಿಗಳು ಒಂದು ಸ್ಪಷ್ಟ ಸ್ವರೂಪ ನೀಡಿ ಪ್ರಚಾರಗೊಳಿಸಿದರು. ಯೋಗ ವ್ಯಕ್ತಿ ತನ್ನ ಆತೊದ್ಧಾರಕ್ಕಾಗಿ ಮಾಡುವ ಸಾಧನ ಎಂದರು.

Advertisement

ಇಂದು ಯೋಗವನ್ನು ಇಡೀ ಜಗತ್ತು ಒಪ್ಪಿದೆ. ವಿಜ್ಞಾನಿಗಳು ಹಾಗೂ ವೈದ್ಯಕೀಯ ಕ್ಷೇತ್ರದವರು ಇದರ ಅಗತ್ಯತೆ ಮನಗಂಡಿದ್ದಾರೆ. ಇದನ್ನೆಲ್ಲ ಗಮನಿಸಿಯೇ ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಯೋಗ ಇಂದು ಅಮೆರಿಕಾದಲ್ಲಿ ಆಧ್ಯಾತ್ನ ಸಾಧನೆಯ ಸಾರ್ವತ್ರಿಕ ಭಾಷೆಯಾಗಿದೆ ಎಂದಿದ್ದಾರೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಣೆಯಾಗುವಂತೆ ಮಾಡಿದ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಶ್ರಮ ಶ್ಲಾಘನೀಯವಾದುದು. ಯೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಜಗತ್ತಿನಾದ್ಯಂತ ಪ್ರಚುರಪಡಿಸುವುದು ಭಾರತೀಯರೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು ಮಾತನಾಡಿ, ಯೋಗ ಎಂದರೆ ಸಂಬಂಧವನ್ನು ಕಲ್ಪಿಸುವುದು, ಜೀವಾತ್ಮ- ಪರಮಾತ್ಮರ ನಡುವಿನ ಸಾಮರಸ್ಯಕ್ಕೆ ಯೋಗ ಸಹಕಾರಿ ಎಂದು ಹೇಳಿದರು. ಜೆ ಎಸ್ ಎಸ್ ಸ್ಟಿ ರುಚ್ಯುಯಲ್ ಮಿಷನ್‌ ಸಲಹಾ ಸಮಿತಿ ಅಧ್ಯಕ್ಷ ಸುಭಾಷ್‌ ಜಿ.ಮಲಗನ್‌, ಸಲಹೆಗಾರರಾದ ಕುಮಾರ್‌ ರಾಜಶೇಖರ್‌, ಸುರೇಶ್‌ ದಾಸರಿ, ಸಂಜಾತ ಸೂಲಕುಂಟೆ ತರರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next