Advertisement
ಈಗಲೇ ಯೋಜನೆ ರೂಪಿಸಿನಾವು ವೃತ್ತಿಯಲ್ಲಿದ್ದಾಗಲೇ ನಮಗೆ ಬೇಕಾದ ಸೌಕರ್ಯ, ವ್ಯವಸ್ಥೆ ಎಲ್ಲವನ್ನು ಮಾಡಿಕೊಳ್ಳುವುದು ಅಗತ್ಯ. ಸ್ವಂತ ಮನೆ, ತೋಟ, ಕೃಷಿ, ಉದ್ಯಮ, ಕಾರು, ಬೈಕ್ ಹೀಗೆ ಕ್ಯಾಪಿಟಲ್, ಅಸೆಟ್ ಮಾಡಿ ಡುವುದರಿಂದ ಮುಂದೆ ನಮ್ಮ ರಿಟೈರ್‌ವೆುಂಟ್ ಸಮಯದಲ್ಲಿ ಇದು ಸಹಾಯಕ್ಕೆ ಬರುತ್ತದೆ. ಏಕೆಂದರೆ ನಿವೃತ್ತಿ ಆದ ಮೇಲೆ ನಮ್ಮ ನಿರಂತರ ಆದಾಯ ನಿಲ್ಲುತ್ತದೆ. ಆಗ ನಮಗೆ ಬೇಕಾದುದನ್ನು ಪಡೆಯಲು ಹಣ ಹೊಂದಿಸುವುದು ಕಷ್ಟ. ಅದಕ್ಕಾಗಿ ವೃತ್ತಿಯಲ್ಲಿದ್ದಾಗಲೇ ಎಲ್ಲವನ್ನು ಮಾಡಿಟ್ಟು ಕೊಳ್ಳುವುದು ಅಗತ್ಯ.
ಮದುವೆ ಆದ ಮೇಲೆ ಸಂಸಾರ, ಮಕ್ಕಳು, ವಿದ್ಯಾಭ್ಯಾಸ ಎಲ್ಲದಕ್ಕೂ ಖರ್ಚು ಸಾಮಾನ್ಯ. ಆದರೆ ಈ ಸಮಯದಲ್ಲಿ ಸ್ಮಾರ್ಟ್ ಇನ್‌ವೆಸ್ಟ್‌ಮೆಂಟ್ ಪ್ಲಾನ್ ರೂಪಿಸಿ ಅದಕ್ಕೆ ಒಂಚೂರು ಹಣ ಸೇರಿಸುವುದರಿಂದ ಮುಂದಿನ ದಿನಗಳಲ್ಲಿ ಸುಖ ಜೀವನ ನಡೆಸಲು ಇದು ಸಹಾಯಕವಾಗುತ್ತದೆ. ಈಗ ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದರಿಂದ ಇದೇನು ಕಷ್ಟವಲ್ಲ. ಇಬ್ಬರೂ ತಮ್ಮ ಆದಾಯದ ಶೇ.10ರಷ್ಟು ಉಳಿತಾಯ ಮಾಡಿದರೆ ಸಾಕು. ಅನವ ಶ್ಯಕ ಖರ್ಚುಗಳನ್ನು ಗಮನಿಸಿ ಅದಕ್ಕೆ ಕಡಿ ವಾಣ ಹಾಕಿದರೂ ಸಾಕು. ಮುಂದಿನ ದಿನಗಳಲ್ಲಿ ಅದೇ ದೊಡ್ಡ ಮೊತ್ತವಾಗುತ್ತದೆ. ಇದರಿಂದ ನಿವೃತ್ತಿ ಹೊಂದಿದ ಮೇಲೆ ತಲೆ ಕೆಡಿಸಿಕೊಳ್ಳುವ ಪ್ರಮೇಯ ಬರುವುದಿಲ್ಲ.