Advertisement
ಒಂದೆಡೆ ಕಿರಿದಾದ ದಾರಿ, ಇನ್ನೊಂದೆಡೆ ಕೆಸರು ತುಂಬಿದ ಸ್ಥಿತಿಯಲ್ಲಿರುವ ಈ ರಸ್ತೆಯ ಬಗ್ಗೆ ಸ್ಥಳೀಯರು ನಗರಸಭೆ ಗಮನಕ್ಕೆ ತಂದಿದ್ದು ಕನಿಷ್ಠ ಪಕ್ಷ ದುರಸ್ತಿ ಮಾಡಿ ಸಂಚಾರದ ಸ್ಥಿತಿಗೆ ತರುವಂತೆ ಆಗ್ರಹಿಸಿದ್ದಾರೆ.
Related Articles
Advertisement
ಈ ಹಿಂದೆ ಆಟೋ ರಿಕ್ಷಾ ಓಡಾಟ ನಡೆಸುತ್ತಿದ್ದ ಈ ರಸ್ತೆ ಕ್ರಮೇಣ ನಿರ್ಲಕ್ಷéಕ್ಕೆ ಈಡಾಗಿ ಕಾಲು ದಾರಿಯ ರೂಪಕ್ಕೆ ಇಳಿದಿದೆ. ಈ ದಾರಿಯಲ್ಲಿ ಸರಕಾರಿ ಕೆರೆಯೊಂದಿದ್ದು ತಡೆಗೋಡೆ ರಹಿತವಾಗಿದೆ. ಹೂಳು ಎತ್ತದೆ 20 ವರ್ಷಗಳೇ ಕಳೆದಿದ್ದು, ಸಣ್ಣ ಮಳೆ ಬಂದರೂ ಕೆರೆ ತುಂಬಿ ರಸ್ತೆಗೆ ನೀರು ನುಗ್ಗಿ ಬಂದ್ ಆಗುವ ಸ್ಥಿತಿ ನಿರ್ಮಾಣಗೊಂಡಿದೆ.
ನಗರಸಭೆ ಅಧ್ಯಕ್ಷರ ಭೇಟಿ:
ಇಲ್ಲಿಯ ನಿವಾಸಿಗಳು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರಿಗೆ ರಸ್ತೆ ಬಗ್ಗೆ ತಿಳಿಸಿದ್ದು, ಅವರು ಸ್ಥಳೀಯ ವಾರ್ಡ್ ಸದಸ್ಯ ಪ್ರೇಮ್‌ಕುಮಾರ್ ಅವರ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿಯ ಜನರ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಹಲವು ವರ್ಷಗಳ ಬೇಡಿಕೆ :
ಇಲ್ಲಿನ ನಿವಾಸಿಗಳು, ಸಂಪರ್ಕ ರಸ್ತೆ ಬಳಕೆದಾರರು ರಸ್ತೆ ವ್ಯವಸ್ಥೆ ಸರಿಪಡಿಸಲು ಹಲವು ಬಾರಿ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನ ಆಗಿಲ್ಲ. ನಗರಸಭೆ ಅಧ್ಯಕ್ಷರ ಭೇಟಿ ನೀಡಿದ ಸಂದರ್ಭ ಈ ವಿಚಾರ ಪ್ರಸ್ತಾವಿಸಿದ್ದಾರೆ. ಈ ಬಾರಿಯಾದರೂ ರಸ್ತೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯ ನಿವಾಸಿಗಳು ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶೀಘ್ರದಲ್ಲಿ ರಸ್ತೆ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಕೆರೆಯನ್ನು ಅಭಿವೃದ್ದಿ ಪಡಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುವುದು. –ಜೀವಂಧರ್ ಜೈನ್, ಅಧ್ಯಕ್ಷ, ನಗರಸಭೆ