ನವದೆಹಲಿ: ಪರಿಸರಕ್ಕೆ ಹಾನಿಯನ್ನುಂಟು ಮಾಡದೆಯೇ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಸಿದ್ಧಾಂತದಲ್ಲಿ ನಮ್ಮ ಸರ್ಕಾರ ನಂಬಿಕೆಯಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್‌ನ ಗಾಂಧಿ ನಗರದಲ್ಲಿ ಆಯೋಜಿಸಲಾದ “ವಲಸೆ ಕೈಗೊಳ್ಳುವ ವನ್ಯಜೀವಿ ಪ್ರಬೇಧಗಳ ಸಂರಕ್ಷಣೆಗೆ ಬದ್ಧವಾದ ರಾಷ್ಟ್ರಗಳ ಒಕ್ಕೂಟದ 13ನೇ ಅಂತಾರಾಷ್ಟ್ರೀಯ ಸಮಾವೇಶ’ವನ್ನು (“ಸಿಒಪಿ’ ಆಫ್ “ಸಿಎಂಎಸ್’) ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
“”ಇಂದಿನ ಜಾಗತಿಕ ತಾಪಮಾನವನ್ನು, ಕೈಗಾರಿಕಾ ಯುಗ ಆರಂಭಕ್ಕೂ ಮುನ್ನ ವಿಶ್ವದಲ್ಲಿ ಇದ್ದ ಸರಾಸರಿ ತಾಪಮಾನಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಮಾತ್ರವೇ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕೆಂದು “ಸಿಒಪಿ ಆಫ್ ಸಿಎಂಎಸ್’ನಲ್ಲಿ ನಿರ್ಧರಿಸಲಾಗಿದೆ. ಈ ಆಶಯಕ್ಕೆ ಭಾರತ ಬದ್ಧವಾಗಿದೆ. ಅತಿಥಿ ದೇವೋಭವ ಎನ್ನುವುದು ಭಾರತದ ಸಂಸ್ಕೃತಿಯ ಮೂಲಮಂತ್ರ. ಹಾಗಾಗಿ, ಯಾವುದೇ ದೇಶದ ವಲಸಿಗ ಹಕ್ಕಿಗೆ ನಮ್ಮ ದೇಶದಲ್ಲಿ ಹೃತೂ³ರ್ವಕ ಸ್ವಾಗತ ಹಾಗೂ ಆಶ್ರಯ ಇರುತ್ತದೆ” ಎಂದಿದ್ದಾರೆ.
ಭಾರತಕ್ಕೆ ಅಧ್ಯಕ್ಷ ಸ್ಥಾನ:
ವಲಸೆ ಕೈಗೊಳ್ಳುವ ವನ್ಯಜೀವಿ ಪ್ರಬೇಧಗಳ ಸಂರಕ್ಷಣೆಗೆ ಬದ್ಧವಾದ ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಭಾರತ ಆಯ್ಕೆಯಾಗಿದೆ. ಮುಂದಿನ 3 ವರ್ಷ ಭಾರತವೇ ಇದರ ನೇತೃತ್ವ ವಹಿಸಲಿದೆ.