Advertisement

USA: ಭಾರತೀಯರ ಅನುಮಾನಾಸ್ಪದ ಸಾವು

12:32 AM Oct 07, 2023 | Team Udayavani |

ವಾಷಿಂಗ್ಟನ್‌: ಭಾರತೀಯ ಮೂಲದ ದಂಪತಿ ಹಾಗೂ ಇಬ್ಬರು ಮಕ್ಕಳು ಅಮೆರಿಕದ ನ್ಯೂಜೆರ್ಸಿ­ಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರು­ವುದು ವರದಿಯಾಗಿದೆ. ತೇಜ್‌ಪ್ರತಾಪ್‌ ಸಿಂಗ್‌ ಹಾಗೂ ಸೋನಾಲ್‌ ಪರಿಹಾರ್‌ ದಂಪತಿ ನ್ಯೂಜೆರ್ಸಿಯ ಪ್ಲೇನ್ಸ್‌ಬೊರೋ ನಿವಾಸಿಗಳಾಗಿದ್ದು, ಐಟಿ ಉದ್ಯೋಗಿಗಳಾಗಿದ್ದ ಅವರಿಗೆ 10 ವರ್ಷದ ಮಗ ಹಾಗೂ 6 ವರ್ಷದ ಮಗಳಿದ್ದಳು.

Advertisement

ಕೆಲವು ವರ್ಷದ ಹಿಂದಷ್ಟೇ ಸ್ವಂತ ಮನೆಯನ್ನೂ ಖರೀದಿಸಿದ್ದರು. ಅ.4ರಂದು ಸಂಬಂಧಿಕರ ಕರೆಗಳಿಗೂ ದಂಪತಿ ಉತ್ತರಿಸದಿದ್ದಾಗ ಅನುಮಾನ ಮೂಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಪರಿಶೀಲಿಸಿದಾಗ ಕುಟುಂಬದ ಸದಸ್ಯರೆಲ್ಲರ ಮೃತದೇಹಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next