Advertisement

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

01:40 PM Jan 09, 2025 | Team Udayavani |

ಭೋಪಾಲ್: ಇಲ್ಲಿನ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ಬುಧವಾರ ಸಂಜೆ ಜೈಲು ಅಧಿಕಾರಿ ಕಣ್ಣಿಗೆ ಚೀನಾ ನಿರ್ಮಿತ ಡ್ರೋನ್ ಬಿದ್ದಿದ್ದು ಆದರೆ ಡ್ರೋನ್ ಎಲ್ಲಿಂದ ಬಂತು ಹೇಗೆ ಬಂತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಅಧಿಕಾರಿಗಳ ಆರಂಭಿಕ ತನಿಖೆಯಲ್ಲಿ ಚೀನಾದ ನಿರ್ಮಿತ ಡ್ರೋನ್ ಎಂದು ಕಂಡುಬಂದಿದೆ, ಜೊತೆಗೆ ಇದು ಎರಡು ಮಸೂರಗಳನ್ನು ಹೊಂದಿದೆ ಎನ್ನಲಾಗಿದೆ. ಸದ್ಯ ಗಾಂಧಿನಗರ ಪೊಲೀಸರ ತಾಂತ್ರಿಕ ತಜ್ಞರ ತಂಡ ಡ್ರೋನ್‌ನ ತನಿಖೆ ನಡೆಸುತ್ತಿದೆ. ಸಂಪೂರ್ಣ ತನಿಖೆಯ ನಂತರವಷ್ಟೇ ವಿಷಯ ಬಹಿರಂಗಗೊಳ್ಳಲಿದೆ.

ಭಯೋತ್ಪಾದಕರು ಬಂಧಿಯಾಗಿರುವ ಕಾರಾಗೃಹ:
ಭೋಪಾಲ್‌ನ ಕೇಂದ್ರ ಕಾರಾಗೃಹವನ್ನು ದೇಶದ ಸೂಕ್ಷ್ಮ ಜೈಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಯಾಕೆಂದರೆ ಈ ಕಾರಾಗೃಹದಲ್ಲಿ ಎಪ್ಪತ್ತಕ್ಕೂ ಹೆಚ್ಚು ಉಗ್ರರನ್ನು ಇರಿಸಲಾಗಿದ್ದು ಜೊತೆಗೆ ಹೆಚ್ಚಿನ ಭದ್ರತೆಯನ್ನೂ ಒದಗಿಸಲಾಗಿದೆ. ಹೀಗಿದ್ದರೂ ಹೈ ಸೆಕ್ಯೂರಿಟಿ ಇರುವ ಜೈಲಿನ ಬಳಿ ಡ್ರೋನ್ ಹೇಗೆ ಬಂತೆಂಬುದೇ ಯಕ್ಷ ಪ್ರಶ್ನೆ.

Advertisement

ಇದನ್ನೂ ಓದಿ: ತಮಿಳುನಾಡು : ಮಹಾ ಪ್ರತ್ಯಂಗಿರಾ ದೇವಿ ದೇವಾಲಯಕ್ಕೆ ಡಿ.ಕೆ. ಶಿವಕುಮಾರ್ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next