Advertisement

Suspension: ವಕೀಲರೊಬ್ಬರನ್ನು ಲಾಕಪ್‌ನಲ್ಲಿ ಹಾಕಿದ ಆರೋಪ: ಕಾನ್‌ಸ್ಟೇಬಲ್‌ಗ‌ಳ ಅಮಾನತು

01:34 PM Sep 10, 2023 | Team Udayavani |

ಬೆಂಗಳೂರು: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಜತೆಗೆ ಮಾತನಾಡುವ ಉದ್ದೇಶದಿಂದ ಠಾಣೆಗೆ ಬಂದ ವಕೀಲರನ್ನು ರಾಜಾನುಕುಂಟೆ ಪೊಲೀಸರು ಲಾಕಪ್‌ನಲ್ಲಿ ಇರಿಸಿರುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಇಬ್ಬರು ಕಾನ್‌ಸ್ಟೆàಬಲ್‌ಗ‌ಳನ್ನು ಬೆಂಗಳೂರು ಗ್ರಾಮಾಂತರ ಎಸ್‌ಪಿ ಅಮಾನತು ಮಾಡಿ ಆದೇಶಿಸಿದ್ದಾರೆ.

Advertisement

ವಕೀಲ ಚಂದ್ರಶೇಖರ್‌ ಅವರನ್ನು ಲಾಕಪ್‌ನಲ್ಲಿ ಹಾಕಿರುವ ಆರೋಪ ಕೇಳಿ ಬಂದಿದೆ. ಯಲಹಂಕ ತಾಲೂಕಿನ ಶ್ಯಾನಬೋಗನಹಳ್ಳಿಯ ಸರ್ಕಾರಿ ಜಮೀನು ವಿಚಾರವಾಗಿ ಪಂಚಾಯತ್‌ನಲ್ಲಿ ಜಗಳ ನಡೆ ದಿತ್ತು. ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರು ವುದಾಗಿ ಆರೋಪಿಸಿದಾಗ ಎರಡು ಗುಂಪಿನ ನಡುವೆ ಜಗಳ ನಡೆದಿತ್ತು. ಈ ವಿಚಾರವಾಗಿ ವಕೀಲ ಚಂದ್ರಶೇಖರ್‌ ರಾಜಾನುಕುಂಟೆ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದರು. ಎದುರು ಪಾರ್ಟಿಯವರು ಠಾಣೆಗೆ ಬಂದಾಗ ವಕೀಲ ಚಂದ್ರಶೇಖರ್‌ ಅವರನ್ನು ಪೊಲೀಸರು ಲಾಕಪ್‌ ಒಳಗಡೆ ಹಾಕಿರುವ ಆರೋಪ ಕೇಳಿ ಬಂದಿದೆ.

ಗುರುವಾರ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ವಕೀಲನನ್ನು ಲಾಕಪ್‌ ಒಳಗಡೆ ಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಕಾನ್‌ಸ್ಟೆàಬಲ್‌ ಕಿರಣ್‌, ಮೋಹನ್‌ಕುಮಾರ್‌ ಅವರನ್ನು ಅಮಾನತು ಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next