Advertisement

ಭಾರತಿಯಾರ್‌ ವಿವಿ ವೈಸ್‌ ಚಾನ್ಸಲರ್‌ ಜಾಮೀನು ಅರ್ಜಿ ತಿರಸ್ಕೃತ

04:11 PM Feb 08, 2018 | udayavani editorial |

ಕೊಯಮುತ್ತೂರು : ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತುಗೊಂಡು ಅರೆಸ್ಟ್‌ ಆಗಿದ್ದ ಭಾರತಿಯಾರ್‌ ವಿಶ್ವವಿದ್ಯಾಲಯದ ವೈಸ್‌ ಚಾನ್ಸಲರ್‌ ಎ ಗಣಪತಿ ಅವರ ಜಾಮೀನು ಕೋರಿಕೆ ಅರ್ಜಿಯನ್ನು ವಿಶೇಷ ನ್ಯಾಯಾಲಯ ಇಂದು ಗುರುವಾರ ವಜಾ ಮಾಡಿದೆ. 

Advertisement

ಸಹಾಯಕ ಪ್ರೊಫೆಸರ್‌ ಹುದ್ದೆಯ ಅಪೇಕ್ಷಿಯಿಂದ 30 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಕಳೆದ ಫೆ.3ರಂದು ಗಣಪತಿ ಅವರನ್ನು ಬಂಧಿಸಲಾಗಿತ್ತು.

ಗಣಪತಿ ಅವರೊಂದಿಗೇ ಬಂಧಿಸಲ್ಪಟ್ಟಿದ್ದ ಕೆಮಿಸ್ಟ್ರಿ ಪ್ರೊಫೆಸರ್‌ ಧರ್ಮರಾಜ್‌ ಅವರನ್ನು ಕೇಂದ್ರ ಜೈಲಿನಲ್ಲಿ ಇಡಲಾಗಿದೆ. 

ಗಣಪತಿ ಮತ್ತು ಧರ್ಮರಾಜ್‌ ಅವರ ಜಾಮೀನು ಕೋರಿಕೆ ಅರ್ಜಿ ತಮ್ಮ ಮುಂದೆ ವಿಚಾರಣೆಗೆ ಬಂದಾಗ ಭ್ರಷ್ಟಾಚಾರ ತಡೆ ಕಾಯಿದೆ ವಿಶೇಷ ನ್ಯಾಯಾಧೀಶ ಜಾನ್‌ ಮಿನೋ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next