Advertisement

ಆರ್.ಆರ್.ನಗರ ಇನ್ಸ್ ಪೆಕ್ಟರ್ ಅಮಾನತು ಮಾಡಿ: ಚುನಾವಣಾಧಿಕಾರಿಗೆ ಕಾಂಗ್ರೆಸ್ ಮನವಿ

04:45 PM Oct 18, 2020 | keerthan |

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿದ ಆರ್.ಆರ್. ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಅವರನ್ನು ವರ್ಗಾವಣೆ ಮತ್ತು ಅಮಾನತುಗೊಳಿಸುವಂತೆ ಕಾಂಗ್ರೆಸ್ ಮನವಿ ಮಾಡಿದೆ.

Advertisement

ಮುಖ್ಯ ಚುನಾವಣಾಧಿಕಾರಿಯವರಿಗೆ ಮನವಿ ಮಾಡಿದ ಕೆಪಿಸಿಸಿ ಸದಸ್ಯರು, ಆರ್.ಆರ್‌.ನಗರ ಇನ್ಸ್ಪೆಕ್ಟರ್ ನವೀನ್ ಪೂರ್ವಾಗ್ರಹ ಪೀಡಿತರಾಗಿ ಹಾಗೂ ಕಾನೂನು ಬಾಹಿರವಾಗಿ ಎಫ್.ಐ.ಆರ್ ದಾಖಲಿಸಿದ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಎಮ್.ಸಲಿಮ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬಿಜೆಪಿಗಿಂತ ನಮ್ಮ ಪಕ್ಷದ ಮೇಲೆಯೇ ಕಾಂಗ್ರೆಸ್ ಗೆ ಕೋಪ, ಅಸೂಯೆ: ಎಚ್ ಡಿ ಕುಮಾರಸ್ವಾಮಿ

ತಮ್ಮ ಅಭ್ಯರ್ಥಿ ಕುಸುಮಾ ಜೊತೆಗೆ ನಾಮಪತ್ರವನ್ನು ಸಲ್ಲಿಸಲು ಒಳಗೆ ಹೋಗಿದ್ದೇ 11.45ಕ್ಕೆ, ಆದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮಾತ್ರ 11.15ಕ್ಕೆ ಹೇಗೆ ಸಾಧ್ಯವಾಗಿದ್ದು ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರ ವಿರುದ್ಧ ಗುಡುಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next