ಬೆಂಗಳೂರು: ಪುರಭವನ ಮುಂಭಾಗದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪರ ಹೋರಾಟದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಆರು ಮಂದಿ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಗಳಿಗೂ ಇತ್ತೀಚೆಗೆ ಬಂಧನಕ್ಕೊಳಗಾದ ಅಲ್-ಉಮ್ಮಾ ಹಾಗೂ ಅಲ್ ಹಿಂದ್ ಸಂಘಟನೆ ಸದಸ್ಯ ರಿಗೆ ಸಂಪರ್ಕ ಇದೆಯೇ ಎಂಬ ಬಗ್ಗೆ ತನಿಖೆ ಆರಂಭಿ ಸಿದ್ದಾರೆ. ಜತೆಗೆ ಪ್ರಕರಣದ ಮಾಸ್ಟರ್ ಮೈಂಡಾಗಿ ಶೋಧ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಿಸಿಬಿ, ತಮಿಳುನಾಡಿನ ಕ್ಯು ಬ್ರ್ಯಾಂಚ್ ಪೊಲೀಸರ ಕಾರ್ಯಚರಣೆಯಲ್ಲಿ ಬಂಧನವಾಗಿರುವ ಹುಸೇನ್‌ಗೂ ಬಂಧಿತ ಆರೋಪಿಗಳಿಗೂ ಸಂಬಂಧವಿದೆ ಯೇ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಆರೋಪಿಗಳು ಹಾಗೂ ಹುಸೇನ್ ಡಿ.ಜೆ.ಹಳ್ಳಿ ನಿವಾಸಿಗಳಾಗಿದ್ದು, ಹುಸೇನ್ ಕೂಡ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಇಬ್ಬರೂ ಭೇಟಿಯಾಗಿರುವುದು ಖಚಿತವಾಗಿದೆ. ಆದರೆ, ಯಾವ ಕಾರಣಕ್ಕೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಒಂದೇ ಪ್ರದೇಶದ ನಿವಾಸಿಗಳಾದರಿಂದ ಔಪಚಾರಿಕವಾಗಿ ಭೇಟಿಯಾಗಿದ್ದರೆ ಅಥವಾ ವಿಧ್ವಂಸಕ ಕೃತ್ಯ ಎಸಗಲು ಭೇಟಿಯಾಗಿದ್ದರೆ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಇರ್ಫಾನ್ ವಿರುದ್ಧ ಗಲಾಟೆ, ಹಲ್ಲೆ, ಕೊಲೆ ಯತ್ನ ಪ್ರಕರಣ ಗಳು ದಾಖಲಾಗಿವೆ.
ಮಾಸ್ಟರ್ ಮೈಂಡ್‌ಗಾಗಿ ಶೋಧ: ಆರ್ಥಿಕ ಸಂಕಷ್ಟದ ಲ್ಲಿರುವ ಎಸ್‌ಡಿಪಿಐ ಸಂಘಟನೆ ಮುಖಂಡರಲ್ಲದೆ ಬೇರೆ ಮಾರ್ಗದಿಂದಲೂ ಆರೋಪಿಗಳಿಗೆ ಹಣ ಸಂದಾಯವಾಗುತ್ತಿತ್ತು. ಆ ಮಾಸ್ಟರ್ ಮೈಂಡ್ ಯಾರು ಎಂಬ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬಾಯಿ ಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಎಸ್‌ಡಿಪಿಐ ಮುಖ್ಯಸ್ಥರು ಹಲ್ಲೆಕೋರರಿಗೂ ನಮಗೂ ಸಂಬಂಧವಿಲ್ಲ. ಪೊಲೀಸರು ಉದ್ದೇಶಪೂರ್ವ ಕವಾಗಿ ಸಂಘಟನೆ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ಪೈಕಿ ಸೌಂಡ್ ಸಿಸ್ಟಂನಲ್ಲಿ ಕೆಲಸ ಮಾಡುವ ಸಾಧೀಕ್ ಹೊರತು ಪಡಿಸಿ ಬೇರೆ ಯಾರು ತಮಗೆ ಪರಿಚಯ ಇಲ್ಲ ಎಂದಿದ್ದಾರೆ.