Advertisement
ಭಾನುವಾರ ಸಂಜೆ ಬಸವೇಶ್ವರನಗರದ ಅಪಾರ್ಟ್‌ಮೆಂಟ್‌ನ ಸಜ್ಜಾದ ಮೇಲೆ ಕೋತಿಯೊಂದು ಸತ್ತಿರುವುದು ಕಂಡುಬಂದಿದೆ. ಬಳಲಿದಂತೆ ಓಡಾಡುತ್ತಿದ್ದ ಮತ್ತೂಂದು ಕೋತಿ ಮಂಗಳವಾರ ಸಾವನ್ನಪ್ಪಿದೆ. ಸ್ಥಳೀಯರ ದೂರಿನ ಮೇರೆಗೆ ಪಾಲಿಕೆ ಅರಣ್ಯ ವಿಭಾಗದ ಸಿಬ್ಬಂದಿ ಎರಡೂ ಕೋತಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಹೆಬ್ಟಾಳದ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಿ ದ್ದಾರೆ.
Related Articles
Advertisement
ಹಳಸಿದ ಆಹಾರವೂ ವಿಷವೇ: ಕೋತಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಆಹಾರ ಅರಸಿಕೊಂಡು ಹೋಗುತ್ತವೆ. ಆಗ ಎರಡು ಮೂರು ದಿನಗಳ ಹಿಂದಿನ ಆಹಾರ ಹಾಕಿದಲ್ಲಿ ಅಥವಾ ಆಹಾರವಿಟ್ಟು ಮೂರ್‍ನಾಲ್ಕು ದಿನಗಳ ನಂತರ ಕೋತಿಗಳು ಸೇವಿಸಿದಲ್ಲಿ ಅದು ವಿಷವಾಗಿ ಪರಿಣಮಿಸುತ್ತದೆ. ಇದರಿಂದಲೂ ಸಾವನ್ನಪ್ಪುವ ಸಾಧ್ಯತೆಯಿದ್ದು, ಈ ಬಗ್ಗೆ ಮರಣೋತ್ತರ ಪರೀಕ್ಷೆ ನಂತರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋತಿಗಳಿದ್ದು, ಅವುಗಳನ್ನು ಒಂದೆಡೆ ಬಿಡಲು ಕೋತಿಗಳ ಉದ್ಯಾನ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿತ್ತು. ಆದರೆ, ಸರ್ಕಾರದಿಂದ ಇದಕ್ಕೆ ಹಸಿರುನಿಶಾನೆ ಸಿಗದ ಹಿನ್ನೆಲೆಯಲ್ಲಿ ಕೋತಿಗಳ ಉದ್ಯಾನ ನಿರ್ಮಾಣದ ಕಾರ್ಯ ನೆನಗುದಿಗೆ ಬಿದ್ದಿದೆ.