Advertisement

ದೆಹಲಿ ಪೊಲೀಸರಿಂದ ಕಣ್ಣೂರು ಮೂಲದ ಶಂಕಿತ ಐಸಿಸ್‌ ಉಗ್ರನ ಬಂಧನ

09:15 AM Jul 12, 2017 | |

 ಹೊಸದಿಲ್ಲಿ : ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ  ಐಸಿಸ್‌ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಕಣ್ಣೂರು ಮೂಲದ 32 ವರ್ಷದ ವ್ಯಕ್ತಿಯನ್ನು ಬುಧವಾರ ಬೆಳಗ್ಗೆ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.  ಬಂಧಿತ ವ್ಯಕ್ತಿ ಟರ್ಕಿಗೆ ತೆರಳಿ ಅಲ್ಲಿಂದ ಸಿರಿಯಾಗೆ ನುಸುಳಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ.  

ಬಂಧಿತನ ಬಳಿ ನಕಲಿ ಪಾಸ್‌ಪೋರ್ಟ್‌ ಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next