Advertisement

ಉತ್ತರಪ್ರದೇಶ:ಪಾಕ್‌ ಐಎಸ್‌ಐ ಎಜೆಂಟ್‌ ಅರೆಸ್ಟ್‌;ತೀವ್ರ ವಿಚಾರಣೆ 

02:12 PM May 24, 2018 | Team Udayavani |

ಲಕ್ನೋ : ಪಿತೋರ್‌ಘಡ್‌ನ‌ಲ್ಲಿ  ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದ ಉತ್ತರ ಪ್ರದೇಶ ಉಗ್ರ ನಿಗ್ರಹ ದಳ, ಜಮ್ಮು ಮತ್ತು ಕಾಶ್ಮೀರ ಮಿಲಿಟರಿ ಗುಪ್ತಚರ ದಳ  ಮತ್ತು ಪೊಲೀಸರು ಶಂಕಿತ ಐಎಸ್‌ಐ ಎಜೆಂಟ್‌ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಬಂಧಿತ ರಮೇಶ್‌ ಸಿಂಗ್‌ ಎಂಬಾತನಾಗಿದ್ದು, ಈತ ಪಾಕಿಸ್ಥಾನಕ್ಕೆ ಭಾರತೀಯ ರಾಯಭಾರಿಯೊಂದಿಗೆ ಮನೆ ಕೆಲಸಕ್ಕೆಂದು ತೆರಳಿದ್ದ. 2015 ರಲ್ಲಿ ಇಸ್ಲಮಾಬಾದ್‌ಗೆ ತೆರಳಿದ್ದ ಈತ 2017 ರಲ್ಲಿ ಭಾರತಕ್ಕೆ ವಾಪಾಸಾಗಿದ್ದಾನೆ. 

ಫೋನ್‌ ಕದ್ದಾಲಿಕೆ ನಡೆಸುತ್ತಿದ್ದ ಎನ್ನಲಾಗಿದ್ದು, ಈತನ ಬಳಿ ಪಾಕ್‌ನ 3 ಸಿಮ್‌ಗಳು ಪತ್ತೆಯಾಗಿವೆ. 

ರಮೇಶ್‌ ಸಿಂಗ್‌ ತನ್ನ ದೇಶದ್ರೋಹಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು  ಈತನಿಗೆ 1,300 ಡಾಲರ್‌ಗೂ ಹೆಚ್ಚು ಹಣ ಕಾಸಿನ ನೆರವು ನೀಡಿರುವ ಬಗ್ಗೆ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next