Advertisement

ಸಿಖ್‌ ಕುಟುಂಬದ ಹತ್ಯೆ: ಮಾಜಿ ಉದ್ಯೋಗಿಯಿಂದಲೇ ಕೃತ್ಯ

07:44 PM Oct 07, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪಂಜಾಬ್‌ ಮೂಲದ ಸಿಖ್‌ ಕುಟುಂಬವನ್ನು ಅಪಹರಿಸಿ, ಕೊಲೆ ಮಾಡಿರುವ ಪ್ರಕರಣ ತನಿಖೆ ಚುರುಕಾಗಿ ನಡೆಯುತ್ತಿದ್ದು, ಕೊಲೆಗೆ ಕಾರಣ ತಿಳಿದುಬಂದಿದೆ.

Advertisement

8 ತಿಂಗಳ ಮಗು ಸೇರಿ ಒಟ್ಟು ನಾಲ್ವರನ್ನು ಅಪಹರಿಸಿದ್ದ ಸಲ್ಗಡೊ ಈ ಹಿಂದೆ ಇದೇ ಕುಟುಂಬದ ಟ್ರಕ್‌ ಉದ್ಯಮದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನುವ ವಿಚಾರ ಬಹಿರಂಗವಾಗಿದೆ.

ಸಲ್ಗಡೊ ಹಾಗೂ ಕೊಲೆಯಾಗಿರುವ ಜಸ್ದೀಪ್ ಸಿಂಗ್‌, ಅಮನ್‌ದೀಪ್‌ ಸಿಂಗ್‌ ನಡುವೆ ಕೆಲಸದ ವಿಚಾರದಲ್ಲಿ ಜಗಳ ಆಗಿತ್ತು. ನಂತರ ಸಲ್ಗಡೊ ಕೆಲಸ ಬಿಟ್ಟು ಹೋಗಿದ್ದ. ಕಳೆದ ವರ್ಷ ಸಿಟ್ಟಿನಿಂದ ಮೇಲ್‌ ಒಂದನ್ನೂ ಮಾಡಿದ್ದ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next