Advertisement
ಅನಂತ್ ಕುಮಾರ್, ಅರುಣ್ ಜೇಟ್ಲಿ, ಸುಷ್ಮಾ ಸ್ವಾರಾಜ್ ಮೊದಲಾದ ಅಡ್ವಾಣಿ ಪರವಾಗಿ ಗುರುತಿಸಿಕೊಂಡಿದ್ದ ಮುತ್ಸದ್ದಿ ನಾಯಕರು ದಿನಬೆಳಗಾಗುತ್ತಿದ್ದಂತೆ ಅಡ್ವಾಣಿ ಮನೆಯಲ್ಲಿರುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಹಾಗೆ ಉಳಿದಿಲ್ಲ. ಅನಂತ್ ಕುಮಾರ್, ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಅವರು ಈಗ ಇಲ್ಲ. ತಮ್ಮ ಪ್ರಿಯ ಶಿಷ್ಯರ ಅನುಪಸ್ಥಿತಿಯಲ್ಲಿ ಅಡ್ವಾಣಿ ಅವರು ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಅನಂತ್ ಕುಮಾರ್ ಅವರು ಇಲ್ಲದ ಎರಡನೇ ಹುಟ್ಟು ಹಬ್ಬವಾದರೂ, ಜೇಟ್ಲಿ ಮತ್ತು ಸುಷ್ಮಾ ಇಲ್ಲದ ಮೊದಲ ಹುಟ್ಟುಹಬ್ಬವಾಗಿದೆ.
ಅಡ್ವಾಣಿ ಅವರೊಂದಿಗೆ ದೀರ್ಘ ಸಮಯ ಪಕ್ಷ ಸಂಘಟನೆಯಲ್ಲಿ ಭಾಗಿಯಾಗಿದ್ದವರು ಸುಷ್ಮಾ ಸ್ವರಾಜ್ . ತಮ್ಮ ರಾಜಕೀಯ ಗುರುವಿನ ಸ್ಥಾನವನ್ನು ಅಡ್ವಾಣಿ ಅವರಿಗೆ ಸುಷ್ಮಾ ನೀಡಿದ್ದರು. ಈ ಸಲುವಾಗಿ ಪ್ರತಿ ವರ್ಷ ಅಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಸುಷ್ಮಾ ಅವರು ಚಾಕಲೇಟ್ ಕೇಕ್ ಜತೆ ಆಗಮಿಸುತ್ತಿದ್ದರು. ಅಡ್ವಾಣಿ ಅವರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಅಚ್ಚುಮೆಚ್ಚು. ಅದನ್ನು ತಂದು ಸುಷ್ಮಾ ಅವರು ಅಡ್ವಾಣಿ ಜತೆ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ ಸುಷ್ಮಾ ಅವರು ಈಗ ನಮ್ಮ ನಡುವೆ ಇಲ್ಲ.