Advertisement

ವಿದ್ಯಾರ್ಥಿನಿಗೆ ವೀಸಾ ಕೊಡಿಸಿದ ಸುಷ್ಮಾ ಸ್ವರಾಜ್‌

06:15 AM Jan 07, 2018 | Team Udayavani |

ಹೊಸದಿಲ್ಲಿ: ಅಮೆರಿಕದಲ್ಲಿ ಉನ್ನತ ವ್ಯಾಸಂಗದ ಕನಸು ಹೊತ್ತಿದ್ದರೂ, ಆ ದೇಶದ ವೀಸಾ ಸಿಗದೇ ತನ್ನಾಸೆಯಿಂದ ದೂರ ಸರಿದಿದ್ದ ರಾಜಸ್ಥಾನದ ಜಲಾಲ್‌ಪುರ ಹಳ್ಳಿಯ 17 ವರ್ಷದ ಭಾನುಪ್ರಿಯಾ ಹರಿತ್ವಾಲ್‌ ಎಂಬ ವಿದ್ಯಾರ್ಥಿನಿ ನೆರವಿಗೆ ಬಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಆಕೆಗೆ ವೀಸಾ ಕೊಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. 2015ರಲ್ಲಿ ರಾಜಸ್ಥಾನ 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್‌ ಪಡೆದಿರುವ ಈಕೆ ಸೇರಿದಂತೆ ಮೊದಲ ಹಾಗೂ ತೃತೀಯ ರ್‍ಯಾಂಕ್‌ ಗಳಿಸಿದ ಮತ್ತಿಬ್ಬರಿಗೆ ಉನ್ನತ ವ್ಯಾಸಂಗಕ್ಕಾಗಿ ರಾಜಸ್ಥಾನ ಸರಕಾರ ತಲಾ 1 ಕೋಟಿ ರೂ. ನೀಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next