Advertisement

ಸುಶಾಂತ್‌ ಆತ್ಮಹತ್ಯೆ: ಇಬ್ಬರು ಪ್ರಭಾವಿಗಳ ವಿಚಾರಣೆ

09:17 AM Jun 21, 2020 | Lakshmi GovindaRaj |

ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಾಲಿವುಡ್‌ನ‌ ಇಬ್ಬರು ಪ್ರಭಾವಿ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸುಶಾಂತ್‌ ಸಿಂಗ್‌  ಯಶಸ್ವೀ ನಟರಾಗಿದ್ದರೂ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದರು ಎಂಬ ಆರೋಪದ ಸತ್ಯಾಸತ್ಯತೆ ಅರಿಯಲು ಶುಕ್ರವಾರ ಈ ವಿಚಾರಣೆ ನಡೆಸಲಾಗಿದೆ.

Advertisement

ಬಾಲಿವುಡ್‌ನ‌ ಪ್ರಭಾವಿ ವ್ಯಕ್ತಿಗಳು ಹಾಗೂ ಇತರೆ ತಾರೆಯರನ್ನು ಸುಶಾಂತ್‌ ಆತ್ಮಹತ್ಯೆ ಪ್ರಕರಣ ಬೇಧಿಸಲು ರಚಿಸಿರುವ ಮೂರು ತನಿಖಾ ತಂಡಗಳ ಪೈಕಿ ಒಂದು ತಂಡ ವಿಚಾರಣೆ ನಡೆಸಿದೆ. ಉಳಿದ ಎರಡು ತಂಡ, ಸುಶಾಂತ್‌ ಮಾಡಿಕೊಂಡಿರುವ ವ್ಯಾವಹಾರಿಕ ಒಪ್ಪಂದಗಳು, ಹೊಂದಿದ್ದ ವೈಯಕ್ತಿಕ ಸಂಬಂಧಗಳ  ಬಗ್ಗೆ ತನಿಖೆ ನಡೆಸುತ್ತಿದೆ.

ಸುಶಾಂತ್‌, ಯಶ್‌ರಾಜ್‌ ಫಿಲ್ಮ್ಸ್ ಜೊತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಸಂಬಂಧಿಸಿದಂತೆ, ಇತರೆ ಎರಡು ಚಿತ್ರ ನಿರ್ಮಾಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ  ದೊರೆತಿದೆ ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next