Advertisement

ದಿನಕ್ಕೊಂದು ತಿರುವು: ಸುಶಾಂತ್ ಸಿಂಗ್ ಪ್ರಕರಣದಲ್ಲಿ ಸಹೋದರಿ ನುಣುಚಿಕೊಳ್ಳುತ್ತಿರುವುದೇಕೆ?

09:51 AM Aug 01, 2020 | Nagendra Trasi |

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಇದೀಗ ಮುಂಬೈ ಪೊಲೀಸರು ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ. ಸುಶಾಂತ್ ಸಿಂಗ್ ಲೋನಾವಾಲಾದಲ್ಲಿ ಬಾಡಿಗೆಗೆ ಫಾರ್ಮ್ ಹೌಸ್ ಪಡೆದಿದ್ದು, ಅದಕ್ಕಾಗಿ ಅವರು ಪ್ರತಿ ತಿಂಗಳು ಐದು ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Advertisement

ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ ಸಿಂಗ್ ಮುಂಬೈ ಪೊಲೀಸರಿಗೆ ಎರಡು ಪುಟಗಳ ಹೇಳಿಕೆಯನ್ನು ನೀಡಿದ್ದಾರೆ. ಆದರೆ ರಿಯಾ ಚಕ್ರವರ್ತಿ ಬಗ್ಗೆ ಯಾವುದೇ ಆರೋಪ ಹೊರಿಸಿಲ್ಲ. ಮುಂಬೈ ಪೊಲೀಸರಿಗೆ ಸುಶಾಂತ್ ಸಿಂಗ್ ತಂದೆ ಯಾವುದೇ ರೀತಿಯ ಹೊಸ ಮಾಹಿತಿಯನ್ನು ನೀಡಿಲ್ಲ ಎಂದು ಮಾಧ್ಯಮವೊಂದರ ವರದಿ ತಿಳಿಸಿದೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ವರ್ಗಾವಣೆ: ಗೆಳತಿ ರಿಯಾ ಬಂಧನ ಸಾಧ್ಯತೆ?

ಮುಂಬೈ ಪೊಲೀಸರು ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮೂರು ಬಾರಿ ಪ್ರಯತ್ನಿಸಿದ್ದರು. ಆದರೆ ಆಕೆ ಏನಾದರು ಕಾರಣ ನೀಡಿ ಹೇಳಿಕೆ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಸುಶಾಂತ್ ಸಿಂಗ್ ತಿಂಗಳಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ. ಈ ನಿಟ್ಟಿನಲ್ಲಿ ಈವರೆಗೆ ನಡೆದ ತನಿಖೆ ಕುರಿತು ದಾಖಲೆಯನ್ನು ಕಲೆ ಹಾಕುವ ಬಗ್ಗೆ ಮುಂಬೈ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ: ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ ಸುಶಾಂತ್ ಸಿಂಗ್ ತಂದೆ

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಗೆಳತಿ ರಿಯಾ ಚಕ್ರವರ್ತಿ ಕೈವಾಡ ಇದೆ ಎಂಬ ಆರೋಪವನ್ನು ರಿಯಾ ತಳ್ಳಿಹಾಕಿದ್ದು, ನನಗೆ ದೇವರು ಮತ್ತು ನ್ಯಾಯದ ಮೇಲೆ ನಂಬಿಕೆ ಇದೆ. ಇದರಿಂದ ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳು ತುಂಬಾ ಭಯಾನಕವಾಗಿ ವರದಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

ಸುಶಾಂತ್ ಸಿಂಗ್ ನಾಟಕೀಯ ತಿರುವು ಪಡೆದುಕೊಂಡಿತ್ತು. ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಕೆಕೆ ಸಿಂಗ್ ಕಳೆದ ವಾರ ರಿಯಾ ಚಕ್ರವರ್ತಿ ಸೇರಿದಂತೆ ಆರು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.

ಇದನ್ನೂ ಓದಿ: ಸುಶಾಂತ್‌ ಮಾಜಿ ಗೆಳತಿ ರಿಯಾ ವಿರುದ್ಧ ನೀರಜ್‌ ಕುಮಾರ್‌ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next