Advertisement

ಸುಶಾಂತ್‌ಗೆ ಆತ್ಮಹತ್ಯೆಯ ಆಲೋಚನೆ ಬಂದಿತ್ತು!

10:47 PM Sep 03, 2020 | mahesh |

ಮುಂಬೈ: ‘ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ಗೆ ಬೈಪೋಲಾರ್‌ ಡಿಸಾರ್ಡರ್‌(ಮಾನಸಿಕ ಕಾಯಿಲೆ) ಇದ್ದಿದ್ದು ನಿಜ. 2019ರ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ಅವರ ಮಾನಸಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಸುಶಾಂತ್‌ಗೆ ಆತ್ಮಹತ್ಯೆ ಮಾಡಿ ಕೊಳ್ಳಬೇಕೆಂಬ ಯೋಚನೆಗಳು ಬರುತ್ತಿವೆ ಎಂಬ ಮಾಹಿತಿಯನ್ನು ರಿಯಾ ಚಕ್ರವರ್ತಿ ಅಂದೇ ನನಗೆ ನೀಡಿದ್ದಳು.’

Advertisement

– ಹೀಗೆಂದು ಹೇಳಿರುವುದು ಸುಶಾಂತ್‌ ಅವರ ಖನ್ನತೆಗೆ ಚಿಕಿತ್ಸೆ ನೀಡುತ್ತಿದ್ದ ಮನಶ್ಯಾಸ್ತ್ರಜ್ಞೆ ಡಾ. ಸುಜಾನೆ ವಾಕರ್‌. ಜು.16ರಂದು ವಿಚಾರಣೆ ವೇಳೆ ಮುಂಬೈ ಪೊಲೀಸರಿಗೆ ಸುಜಾನೆ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖೀಸಿ ‘ಇಂಡಿಯಾ ಟುಡೇ’ ಈ ಬಗ್ಗೆ ವರದಿ ಮಾಡಿದೆ. ಅಲ್ಲದೆ, ಖುದ್ದು ಸುಶಾಂತ್‌ ಅವರೇ, “”ನನಗೆ ನಾಚಿಕೆಯ ಸ್ವಭಾವ ಜಾಸ್ತಿಯಿದೆ. ಏಕೆಂದರೆ, ಬಾಲ್ಯದಲ್ಲೇ ನನ್ನನ್ನು ಹಲವರು ಲೇವಡಿ ಮಾಡುತ್ತಿದ್ದರು. ನಾನು ಅಮ್ಮನೊಂದಿಗೇ ಹೆಚ್ಚಾಗಿ ಇರುತ್ತಿದ್ದೆ. ಆದರೆ, ಅಮ್ಮ ಮೃತಪಟ್ಟ ಬಳಿಕ ಸಹೋದರಿ ಯರೊಂದಿಗೆ ಹೆಚ್ಚು ಆತ್ಮೀಯನಾದೆ. ಅಪ್ಪನೊಂದಿಗೆ ಹೆಚ್ಚೇನೂ ಆತ್ಮೀಯ ಸಂಬಂಧ ಹೊಂದಿರಲಿಲ್ಲ” ಎಂದು ಮನಶ್ಯಾಸ್ತ್ರಜ್ಞೆ ಸುಜಾನೆ ಹೇಳಿದ್ದಾರೆ.

ಅಷ್ಟೇ ಅಲ್ಲ, ಸುಶಾಂತ್‌ಗೆ ತನ್ನ ಮಾನಸಿಕ ಕಾಯಿಲೆ ಬಗ್ಗೆ ಅರಿವಿತ್ತು. ಆದರೆ ಅದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಹಾಗಾಗಿ, ಔಷಧ ವನ್ನೂ ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ತಾನು ಈ ಕಾಯಿಲೆಯಿಂದ ಮುಕ್ತನಾಗುವು ದಿಲ್ಲ ಎಂಬ ಭಾವನೆಯೂ ಅವರ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದೂ ಸುಜಾನೆ ಅಭಿಪ್ರಾಯಪಟ್ಟಿದ್ದಾರೆ.

ನಿಮಿಷವೂ ದಿನವಾಗಿ ಕಾಡುತ್ತಿತ್ತು: ಸುಶಾಂತ್‌ ಗಂಭೀರ ಖನ್ನತೆ, ಉದ್ವೇಗ ಸೇರಿದಂತೆ ಹಲವು ರೀತಿಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದರು. ಆದರೂ ಅವರು ಔಷಧ ಸೇವನೆ ನಿಲ್ಲಿಸಿದ್ದರು. ಹೀಗಾಗಿ ಅವರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಅವರಿಗೆ ಒಂದು ನಿಮಿಷವೂ ಹಲವು ದಿನಗ ಳಂತೆ ಕಾಡಲಾರಂಭಿಸಿತ್ತು ಎಂದು ಸುಶಾಂತ್‌ಗೆ ಚಿಕಿತ್ಸೆ ನೀಡಿದ್ದ ಮತ್ತೂಬ್ಬ ವೈದ್ಯರೂ ಹೇಳಿದ್ದಾರೆ.

ಸುಶಾಂತ್‌ರ ಆರೋಗ್ಯ, ಅವರ ಔಷಧಗಳು, ವೈದ್ಯರೊಂದಿಗಿನ ಸಮಾಲೋಚನೆ ಸೇರಿದಂತೆ ಎಲ್ಲವನ್ನೂ ರಿಯಾ ನೋಡಿಕೊಳ್ಳುತ್ತಿದ್ದರು. ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದರು. ಆತ್ಮಹತ್ಯೆಗೂ ಕೆಲವು ದಿನಗಳ ಮುನ್ನ ಸುಶಾಂತ್‌ ಮತ್ತು ರಿಯಾ ನನ್ನನ್ನು ವಿಡಿಯೋ ಕಾಲ್‌ ಮೂಲಕ ಸಂಪರ್ಕಿಸಿದ್ದರು. ನಿಯಮಿತವಾಗಿ ಔಷಧ ಸೇವಿಸುವಂತೆ ನಾನು ಸೂಚಿಸಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next