Advertisement
ಸುಶಾಂತ್‌ರ ಬಾಲ್ಯದಿಂದ ಹಿಡಿದು ಕನಸಿನ ನಗರಿ ಮುಂಬಯಿಗೆ ತೆರಳಿ, ಬದುಕನ್ನು ಅಂತ್ಯಗೊಳಿಸುವವರೆಗೆ ಎಲ್ಲ ಮಾಹಿತಿಗಳನ್ನೂ ಆ ಪತ್ರದಲ್ಲಿ ವಿವರಿಸಲಾಗಿದೆ. ಜತೆಗೆ, ತಮ್ಮ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ, ಮುಂಬಯಿ ಪೊಲೀಸರು ತನಿಖೆಯಲ್ಲಿ ವಹಿಸಿದ ನಿರ್ಲಕ್ಷ್ಯದ ಕುರಿತೂ ಉಲ್ಲೇಖೀಸಲಾಗಿದೆ. ಅಲ್ಲದೆ, ರಿಯಾ ಮತ್ತವರ ಕುಟುಂಬ ಸದಸ್ಯರ ವಿರುದ್ಧವೂ ಕಿಡಿಕಾರಲಾಗಿದೆ.
ಸುಶಾಂತ್ ಸಾವಿಗೆ ಸಂಬಂಧಿಸಿ ರಾಜಕಾರಣಿಗಳ ಲೂಸ್‌ಟಾಕ್ ಮುಂದುವರಿದಿದೆ. ಸುಶಾಂತ್ ಅವರು ಸಾವಿನ ನಂತರ ಫೇಮಸ್ ಆದಷ್ಟು ಸಾವಿಗೂ ಮುನ್ನ ಆಗಿರಲಿಲ್ಲ ಎಂದು ಎನ್‌ಸಿಪಿ ನಾಯಕ ಮಜೀದ್ ಮೆಮನ್ ಬುಧವಾರ ಹೇಳಿದ್ದಾರೆ. ಈ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ, ಅವರ ಹೇಳಿಕೆಯಿಂದ ಪಕ್ಷ ದೂರ ಉಳಿದಿದೆ. ಇದು ಮೆಮನ್ ಅವರ ವೈಯಕ್ತಿಕ ಹೇಳಿಕೆಯಾ ಗಿದೆಯೇ ವಿನಾ ಪಕ್ಷದ್ದಲ್ಲ ಎಂದು ಎನ್‌ಸಿಪಿ ಸ್ಪಷ್ಟಪಡಿಸಿದೆ. ಜತೆಗೆ, ಮೆಮನ್ ಅವರೂ ಸ್ಪಷ್ಟನೆ ನೀಡಿ, ಸುಶಾಂತ್‌ರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.