Advertisement

ಹೊರಬಿತ್ತು ನಟ ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ವರದಿ

04:15 PM Jun 15, 2020 | keerthan |

ಮುಂಬೈ: ಬಾಲಿವುಡ್ ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ರವಿವಾರ ತನ್ನ ಮುಂಬೈ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಿಗ್ಗೆ ಸುಶಾಂತ್ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರತಿಭಾನ್ವಿತ ನಟ ನಿಧನದ ಸುದ್ದಿಯಿಂದ ಭಾರತೀಯ ಚಿತ್ರಂಗ ಆಘಾತಕ್ಕೆ ಒಳಗಾಗಿತ್ತು.

Advertisement

34 ವರ್ಷದ ಯುವನಟನ ಸಾವಿನ ಹಿಂದೆ ಹಲವಾರು ಅನುಮಾನಗಳು ಮೂಡಿಬಂದಿದ್ದವು. ಕೆಲವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬಂತೆ ಮಾತನಾಡಿಕೊಂಡಿದ್ದರು. ಸದ್ಯ ಇದಕ್ಕೆಲ್ಲಾ ಅವರ ಮರಣೋತ್ತರ ವರದಿ ಉತ್ತರ ನೀಡಿದೆ.

ನೇಣು ಬಿಗಿದುಕೊಂಡ ಕಾರಣ ಸುಶಾಂತ್ ಸಿಂಗ್ ಮರಣಹೊಂದಿದ್ದಾರೆ. ದೇಹದ ಮೇಲೆ ಯಾವುದೇ ಇತರ ಗಾಯದ ಗುರುತುಗಳಿಲ್ಲ. ಹಾಗಾಗಿ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಸುಶಾಂತ್ ಸಿಂಗ್ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗಿದೆ. ನಟನಿಗೆ ಕೋವಿಡ್ ಸೋಂಕು ತಾಗಿರಲಿಲ್ಲ ಎಂದು ವರದಿಯಾಗಿದೆ.

ಕಿರುತೆರೆಯಿಂದ ಬಾಲಿವುಡ್ ಗೆ ಕಾಲಿಟ್ಟಿದ್ದ ಸುಶಾಂತ್, ಕೈ ಪೋಚೆ, ಶುಧ್ಧ್ ದೇಸಿ ರೊಮ್ಯಾನ್ಸ್, ಎಂ ಎಸ್ ಧೋನಿ, ಚಿಚೋರೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಸುಶಾಂತ್ ಸಿಂಗ್ ಅಂತ್ಯಕ್ರಿಯೆ ಇಂದು ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next