Advertisement
ದೇಶದ ಪ್ರತಿಷ್ಠಿತ ಗುಪ್ತಚರ ಸಂಸ್ಥೆ ರಾ ಮಾಜಿ ಅಧಿಕಾರಿ ಎನ್ ಕೆ ಸೂದ್ ಇದೀಗ ಹಲವಾರು ಪ್ರಶ್ನೆಗಳು ಮತ್ತು ವಿಷಯಗಳನ್ನು ಬಹಿರಂಗಗೊಳಿಸುವ ಮೂಲಕ ಸುಶಾಂತ್ ಸಾವಿನ ಕುರಿತ ಅನುಮಾನಗಳು ಮತ್ತಷ್ಟು ಹೆಚ್ಚಾಗತೊಡಗಿದೆ ಎಂದು ವರದಿ ತಿಳಿಸಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ವ್ಯವಸ್ಥಿತ ಸಂಚು ನಡೆಸುವ ಮೂಲಕ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಸಹಚರರ ಮೂಲಕ ಹತ್ಯೆಗೈದಿರುವುದಾಗಿ ಸೂದ್ ಆರೋಪಿಸಿದ್ದಾರೆ. ರಾ ಮಾಜಿ ಅಧಿಕಾರಿ ಸೂದ್ ವಿಡಿಯೋದಲ್ಲಿ ತಿಳಿಸಿರುವಂತೆ, ದಾವೂದ್ ಈಗ ಮುಂಬೈನಲ್ಲಿ ಇಲ್ಲದಿರಬಹುದು. ಆದರೆ ಇಡೀ ಮುಂಬೈ ನಗರಿ ಹಾಗೂ ಬಾಲಿವುಡ್ ಮೇಲೆ ದಾವೂದ್ ಬಲಿಷ್ಠವಾದ ಹಿಡಿತ ಹೊಂದಿದ್ದಾನೆ ಎಂದು ತಿಳಿಸಿದ್ದಾರೆ. ಸುಶಾಂತ್ ಸಾಯುವ ಮುನ್ನ ದಾವೂದ್ ಸಹಚರರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಿಂಗ್ 50 ಬಾರಿ ಸಿಮ್ ಕಾರ್ಡ್ ಬದಲಾಯಿಸಿದ್ದರು. ತಾನು ಮನೆಯಲ್ಲಿ ಮಲಗಿದರೆ ತನ್ನನ್ನು ಹತ್ಯೆಗೈಯಬಹುದು ಎಂಬ ಜೀವ ಭಯದಿಂದ ಸುಶಾಂತ್ ಕಾರನ್ನು ದೂರದಲ್ಲಿಟ್ಟು ಮಲಗುತ್ತಿದ್ದರು ಎಂದು ತಿಳಿಸಿದ್ದಾರೆ.
Related Articles
ಸೂದ್ ಅವರ ಪ್ರಕಾರ, ಸುಶಾಂತ್ ಅವರನ್ನು ಪ್ರೊಫೆಶನಲ್ ಕ್ರಿಮಿನಲ್ ಗಳೇ ಹತ್ಯೆಗೈದಿದ್ದಾರೆ. ಸುಶಾಂತ್ ಸಾವಿಗೂ ಮುನ್ನ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿದ್ದ ಸಿಸಿಟಿವಿ ಹಾಳಾಗಿದ್ದೇಕೆ? ಮನೆಯ ಡೂಪ್ಲಿಕೇಟ್ ಕೀ ಕೂಡಾ ಮಿಸ್ ಆಗಿದೆ. ಇವೆಲ್ಲವೂ ನಟ ಸುಶಾಂತ್ ಅವರನ್ನು ಕೊಲೆಗೈಯಲಾಗಿದೆ ಎಂಬುದಕ್ಕೆ ಪುರಾವೆಯಾಗಿದೆ ಎಂದು ದೂರಿದ್ದಾರೆ.
Advertisement
ಸುಶಾಂತ್ ಎದುರಿಸುತ್ತಿದ್ದ ಜೀವ ಭಯದ ಬಗ್ಗೆ ಆತನ ಪ್ರೇಯಸಿ ರಿಯಾ ಚಕ್ರವರ್ತಿ, ಆತನ ಆಪ್ತ ಸ್ನೇಹಿತ ಸಂದೀಪ್ ಸಿಂಗ್ ಹಾಗೂ ಮನೆಯ ಕೆಲಸದಾಳಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಅವರೆಲ್ಲರು ಇವೆಲ್ಲದರಿಂದ ದೂರ ಸರಿದ ಪರಿಣಾಮ ನಟ ಸಿಂಗ್ ಒಬ್ಬಂಟಿಯಾಗುವಂತಾಗಿತ್ತು ಎಂದು ತಿಳಿಸಿದ್ದಾರೆ.
ಸೂದ್ ಅವರ ವಿಡಿಯೋದಲ್ಲಿ ಬಾಲಿವುಡ್ ಬಿಗ್ ಸ್ಟಾರ್ ಗಳಾದ ಸಲ್ಮಾನ್ ಖಾನ್ ಮತ್ತು ಕರಣ ಜೋಹರ್ ಹೆಸರನ್ನು ಪ್ರಸ್ತಾಪಿಸಿದ್ದದಾರೆ, ಆದರೆ ಇವರ ಬಗ್ಗೆ ಯಾವುದೇ ಹೆಚ್ಚಿನ ವಿಷಯ ಬಹಿರಂಗಪಡಿಸಿಲ್ಲ. ಮುಂಬೈ ಪೊಲೀಸರು ತಾವು ಈ ಪ್ರಕರಣದ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ತೋರಿಸುತ್ತಿದ್ದಾರೆ. ಆದರೆ ಸತ್ಯಾಂಶ ಏನೆಂದರೆ ಅವರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.