ನವದೆಹಲಿ/ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸುಪ್ರೀಂಕೋರ್ಟ್ ಬುಧವಾರ (ಆಗಸ್ಟ್ 19, 2020) ತೀರ್ಪು ನೀಡಿದೆ. ಅಲ್ಲದೇ ಸುಶಾಂತ್ ಸಿಂಗ್ ತಂದೆ ಬಿಹಾರ ಪೊಲೀಸರಲ್ಲಿ ಎಫ್ ಐಆರ್ ದಾಖಲಿಸಿರುವುದು ಸಮರ್ಪಕವಾಗಿದೆ ಎಂದು ತಿಳಿಸಿದೆ.
ಬಿಹಾರ ಪೊಲೀಸರ ಎಫ್ಐಆರ್ ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು, ಈ ಪ್ರಕರಣ ಅವರ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಸಿಬಿಐ ತನಿಖೆಗೆ ಶಿಫಾರಸು ಮಾಡುವ ಅಧಿಕಾರವೂ ಅವರಿಗಿಲ್ಲ. ಆದರೆ, ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಯೇ ನಡೆಸಲಿ ಎಂದು ಹೇಳಿತ್ತು.
ಇದನ್ನೂ ಓದಿ: ವಿಚಾರಣೆಯಲ್ಲಿ ಬಹಿರಂಗ: ನಟ ಸುಶಾಂತ್ ಗೆ ಸಾಲು, ಸಾಲು ಮಹಿಳಾ ಮ್ಯಾನೇಜರ್ ಗಳಿದ್ರು!
ಹೇಳಿಕೆ ದಾಖಲು: ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಂಗಳವಾರ ಸುಶಾಂತ್ ತಂದೆ ಕೆ.ಕೆ.ಸಿಂಗ್ ಹೇಳಿಕೆ ಪಡೆದಿದೆ. ಸುಶಾಂತ್‌ರ ಆದಾಯ, ಹೂಡಿಕೆ, ವೃತ್ತಿಪರ ಅಸೈನ್‌ಮೆಂಟ್‌ಗಳು ಹಾಗೂ ರಿಯಾ ಮತ್ತಿತರರ ಜತೆಗಿನ ಸಂಬಂಧದ ಕುರಿತು ಪ್ರಶ್ನಿಸಲಾಗಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಮುನ್ನ ಗೂಗಲ್ ನಲ್ಲಿ ಹುಡುಕಾಡಿದ ವಿಷಯ ಯಾವುದು ಗೊತ್ತಾ?
ಈ ನಡುವೆ, ರಿಯಾ ಚಕ್ರವರ್ತಿ ಶಿವಸೇನೆ ನಾಯಕ ಆದಿತ್ಯ ಠಾಕ್ರೆಯವರನ್ನು ಯಾವತ್ತೂ ಭೇಟಿಯಾಗಿಲ್ಲ ಎಂದು ರಿಯಾ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಕೇಸ್: ಗೆಳತಿ ರಿಯಾ ಚಕ್ರವರ್ತಿಯನ್ನು ವಶಕ್ಕೆ ತೆಗೆದುಕೊಳ್ಳಿ; ಬಿಜೆಪಿ ನಾಯಕ