Advertisement

ಸುಶಾಂತ್ ಸಿಂಗ್ ರಜಪೂತ್ ಕೇಸ್: ರಿಯಾ ಚಕ್ರವರ್ತಿಗೆ ಅ.20ರವರೆಗೆ ಜೈಲೇ ಗತಿ!

03:09 PM Oct 06, 2020 | Nagendra Trasi |

ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 20ರವರೆಗೆ ಮುಂಬೈನ ಎನ್ ಡಿಪಿಎಸ್ ಕೋರ್ಟ್ ಮಂಗಳವಾರ (ಅಕ್ಟೋಬರ್ 06, 2020) ರದವರೆಗೆ ವಿಸ್ತರಿಸಿದ್ದು, ಇದರಿಂದಾಗಿ ರಿಯಾ ಇನ್ನಷ್ಟು ದಿನ ಜೈಲಿನಲ್ಲಿಯೇ ಇರಬೇಕಾಗಿದೆ.

Advertisement

ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಇತರರ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ರಿಯಾ ಚಕ್ರವರ್ತಿ ಬಾಂಬೆ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ತೀರ್ಪನ್ನು ಸೆಪ್ಟೆಂಬರ್ 29ರಂದು ಕಾಯ್ದಿರಿಸಿತ್ತು. ಈ ಆದೇಶ ಬುಧವಾರ(ಅ.7)ರಂದು ಹೊರಬೀಳುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ರಿಯಾ ಚಕ್ರವರ್ತಿ ಸೇರಿದಂತೆ ಶೋವಿಕ್ ಚಕ್ರವರ್ತಿ, ಸುಶಾಂತ್ ಮನೆಯ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂಡಾ ಮತ್ತು ಇತರರಿಗೆ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 6ರವರೆಗೆ ವಿಸ್ತರಿಸಲಾಗಿದೆ. ರಿಯಾ ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಇದ್ದಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಚೆಂಡಿಗೆ ಎಂಜಲು ಮುಟ್ಟಿಸಿದ ವಿರಾಟ್ ಕೊಹ್ಲಿ!

ರಿಯಾ ಚಕ್ರವರ್ತಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಎನ್ ಸಿಬಿ ಅಧಿಕಾರಿಗಳು ಬಾಂಬೆ ಹೈಕೋರ್ಟ್ ನಲ್ಲಿ ಬಲವಾದ ಆಕ್ಷೇಪಣೆ ಸಲ್ಲಿಸಿದ್ದರು. ನಾವು ಈ ಪ್ರಕರಣದಲ್ಲಿ ಮುಖ್ಯವಾಗಿ ಯುವಕರು ಸೇರಿದಂತೆ ಸಮಾಜಕ್ಕೆ ಕಠಿಣ ಸಂದೇಶವನ್ನು ರವಾನಿಸಬೇಕಾದ ಅಗತ್ಯವಿದೆ ಎಂದು ಎನ್ ಸಿಬಿ ಪ್ರತಿಪಾದಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next