Advertisement
ಸುಶಾಂತ್ ಸೂಚನೆ ಮೇರೆಗೆ ನಾನು ಹಲವು ಬಾರಿ ಅವರಿಗಾಗಿ ಡ್ರಗ್ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಮಾರ್ಚ್‌ನಲ್ಲಿ ಬಾಸಿತ್ ಪರಿಹಾರ್ ನನಗೆ ಜೈದ್ ವಿಲಾತ್ರಾನನ್ನು ಪರಿಚಯಿಸಿದ್ದ. ನಂತರ ಆತ ಸುಶಾಂತ್ ಮ್ಯಾನೇಜರ್ ಸ್ಯಾಮುವೆಲ್‌ಗೆ ಗಾಂಜಾ ಹಸ್ತಾಂತರಿಸಿದ್ದ ಎಂದೂ ಶೋವಿಕ್ ಹೇಳಿದ್ದಾನೆ.
ಎನ್‌ಸಿಬಿ ವಶದಲ್ಲಿರುವಾಗ ನನ್ನಿಂದ ಒತ್ತಾಯಪೂರ್ವಕವಾಗಿ ತಪ್ಪೊಪ್ಪಿಗೆ ಹೇಳಿಕೆ ಬರೆಸಲಾಗಿದೆ ಎಂದು ತಮ್ಮ ಜಾಮೀನು ಅರ್ಜಿಯಲ್ಲಿ ರಿಯಾ ಹೇಳಿದ್ದಾರೆ. ರಿಯಾ ಮತ್ತು ಶೋವಿಕ್ ಜಾಮೀನು ಅರ್ಜಿಯ ತೀರ್ಪು ಶುಕ್ರವಾರ ಪ್ರಕಟವಾಗುವ ಸಾಧ್ಯತೆಯಿದೆ.