ಬೆಂಗಳೂರು : ಈದ್ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಸಲ್ಮಾನ್ ಖಾನ್ ಅಭಿನಯದ ರಾಧೇ ಸಿನಿಮಾ ಚಿತ್ರದ ವಿರುದ್ಧ ಸುಶಾಂತ್ ಸಿಂಗ್ ಅಭಿಮಾನಿಗಳು ಗರಂ ಆಗಿದ್ದಾರೆ.
ಸುಶಾಂತ್ ಸಿಂಗ್ ಇಲ್ಲದೇ ಬಾಲಿವುಡ್ ಇಲ್ಲ, ಸೋ ‘ಬಾಯ್‌ಕಟ್ ರಾಧೇ’ ಎಂದು ಕೆಲವರು ಸಲ್ಲು ಚಿತ್ರ ವಿರೋಧಿಸಿದ್ದಾರೆ.
ಸುಶಾಂತ್ ಸಿಂಗ್ ಫಾಲೋವರ್ಸ್ ಟ್ವಿಟ್ಟರ್‌ನಲ್ಲಿ Boycottradhe, BoycottBollywood ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಟ್ರೆಂಡಿಂಗ್ ಮಾಡಿದ್ದಾರೆ.
ಬಿಟೌನ್ ಪ್ರಭಾವಿಗಳಿಂದ ಸುಶಾಂತ್ ಸಾಯಬೇಕಾಯಿತು. ಆ ಪ್ರಭಾವಿಗಳಲ್ಲಿ ಸಲ್ಮಾನ್ ಖಾನ್ ಸಹ ಇದ್ದಾರೆ ಎಂದು ಟೀಕಿಸುತ್ತಿದ್ದಾರೆ.
ಇನ್ನು 2020 ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆ ಮಾಡ್ತಿದ್ದು, ಅಂತಿಮ ವರದಿ ಸಲ್ಲಿಸಿಲ್ಲ. ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಸುಶಾಂತ್ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದ್ದರೂ ಸುಶಾಂತ್ ಕುಟುಂಬ ಹಾಗೂ ಇನ್ನು ಕೆಲವರು ಇದು ಕೊಲೆ ಎಂದು ಆರೋಪಿಸಿದರು. ಈ ಹಿನ್ನೆಲೆ ಸಿಬಿಐಗೆ ಈ ಕೇಸ್ ವರ್ಗಾಯಿಸಲಾಗಿದೆ.