Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 7 ವಿಕೆಟಿಗೆ 215 ರನ್ ರಾಶಿ ಹಾಕಿತು. ಇದು ಭಾರತದ ವಿರುದ್ಧ ಇಂಗ್ಲೆಂಡ್ ಗಳಿಸಿದ ಅತ್ಯಧಿಕ ಗಳಿಕೆ. 2007ರ ಡರ್ಬನ್ ಪಂದ್ಯದಲ್ಲಿ 6ಕ್ಕೆ 200 ರನ್ ಗಳಿಸಿದ ದಾಖಲೆಯನ್ನು ಉತ್ತಮಗೊಳಿಸಿತು. ಜವಾಬಿತ್ತ ಭಾರತ 20 ಓವರ್‌ಗಳಲ್ಲಿ 9 ವಿಕೆಟಿಗೆ 198 ರನ್ ಬಾರಿಸಿ ಶರಣಾಯಿತು.
Related Articles
Advertisement
ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ಭಾರತದ ಅನನುಭವಿ ಬೌಲಿಂಗ್ ಲಾಭವನ್ನು ಜೇಸನ್ ರಾಯ್-ಜಾಸ್ ಬಟ್ಲರ್ ಚೆನ್ನಾಗಿಯೇ ಬಳಸಿಕೊಂಡರೂ ಇನ್ನಿಂಗ್ಸ್ ಬೆಳೆಸುವಲ್ಲಿ ವಿಫಲರಾದರು. ಹತ್ತರ ಸರಾಸರಿಯಲ್ಲಿ ರನ್ ಬರತೊಡಗಿತು. 3.4 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 31 ರನ್ ಒಟ್ಟುಗೂಡಿತು. ಆಗ ಆವೇಶ್ ಖಾನ್ ಮೊದಲ ಯಶಸ್ಸು ತಂದಿತ್ತರು. ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ನಾಯಕ ಬಟ್ಲರ್ 18 ರನ್ ಮಾಡಿ ಬೌಲ್ಡ್ ಆದರು (9 ಎಸೆತ, 2 ಬೌಂಡರಿ, 1 ಸಿಕ್ಸರ್). ಪವರ್ ಪ್ಲೇ ಮುಕ್ತಾಯಕ್ಕೆ ಇಂಗ್ಲೆಂಡ್ ಒಂದು ವಿಕೆಟಿಗೆ 52 ರನ್ ಮಾಡಿತ್ತು. ಈ ನಡುವೆ ವೇಗಿ ಉಮ್ರಾನ್ ಮಲಿಕ್ ಅವರ ಮೊದಲ ಓವರ್‌ನಲ್ಲೇ 16 ರನ್ ಸೋರಿಹೋಯಿತು. ಆದರೆ ದ್ವಿತೀಯ ಓವರ್‌ನ ಮೊದಲ ಎಸೆತದಲ್ಲೇ ದೊಡ್ಡ ಬೇಟೆಯೊಂದನ್ನು ಆಡಿದರು. 26 ರನ್ ಮಾಡಿದ ರಾಯ್ ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು (26 ಎಸೆತ, 1 ಬೌಂಡರಿ, 2 ಸಿಕ್ಸರ್). ಭಾರತಕ್ಕೆ 3ನೇ ಯಶಸ್ಸು ತಂದಿತ್ತವರು ಹರ್ಷಲ್ ಪಟೇಲ್. 8 ರನ್ ಮಾಡಿದ ಫಿಲಿಪ್ ಸಾಲ್ಟ್ ಬೌಲ್ಡ್ ಆದರು. ಅರ್ಧ ದಾರಿ ಮುಗಿಯುವ ವೇಳೆ ಇಂಗ್ಲೆಂಡ್ 3 ವಿಕೆಟಿಗೆ 86 ರನ್ ಗಳಿಸಿತ್ತು. ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡಿದ್ದ ಎಡಗೈ ಬ್ಯಾಟರ್ ಡೇವಿಡ್ ಮಲಾನ್ ಭಾರತದ ಬೌಲರ್ ಗಳನ್ನು ಕಾಡುತ್ತಲೇ ಹೋದರು. 30 ಎಸೆತಗಳಿಂದ 12ನೇ ಅರ್ಧ ಶತಕ ಪೂರ್ತಿ ಗೊಳಿಸಿ ದರು. ಇದು ಈ ಸರಣಿಯಲ್ಲಿ ಇಂಗ್ಲೆಂಡ್ ಕಡೆಯಿಂದ ದಾಖಲಾದ ಮೊದಲ ಫಿಫ್ಟಿ. ಮಲಾನ್ ಸಿಡಿತದಿಂದಾಗಿ ಸರಾಗವಾಗಿ ರನ್ ಏರತೊಡಗಿತು. 14.3 ಓವರ್‌ಗಳಲ್ಲಿ 150 ರನ್ ಪೂರ್ತಿಗೊಂಡಿತು. ಭಾರತದ ಯಾವುದೇ ಬೌಲರ್‌ಗಳ ಆಟ ನಡೆಯಲಿಲ್ಲ. ಮತ್ತೋರ್ವ ಬಿಗ್ ಹಿಟ್ಟರ್ ಲಿವಿಂಗ್‌ಸ್ಟೋನ್ ಡೆತ್ ಓವರ್‌ಗಳಲ್ಲಿ ಸಿಡಿಯುವ ಸೂಚನೆ ನೀಡಿ ದರು. ಆದರೆ ಮಲಾನ್ ಪೆವಿಲಿಯನ್ ಸೇರಿ ಕೊಂಡರು. ಬಿಷ್ಣೋಯಿ ಎಸೆತವನ್ನು ಆಕಾಶಕ್ಕೆತ್ತಿ ಪಂತ್‌ಗೆ ಕ್ಯಾಚ್ ನೀಡಿದರು. ಮಲಾನ್ ಗಳಿಕೆ 39 ಎಸೆತಗಳಿಂದ 77 ರನ್. ಸಿಡಿಸಿದ್ದು 6 ಬೌಂಡರಿ, 5 ಸಿಕ್ಸರ್. ಮಲಾನ್-ಲಿವಿಂಗ್‌ಸ್ಟೋನ್ 43 ಎಸೆತಗಳಿಂದ 84 ರನ್ ಜತೆಯಾಟ ನಿಭಾ ಯಿಸಿದರು. ಲಿವಿಂಗ್‌ಸ್ಟೋನ್ ಗಳಿಕೆ ಅಜೇಯ 42 ರನ್ (29 ಎಸೆತ, 4 ಸಿಕ್ಸರ್). ಬಿಷ್ಣೋಯಿ ಅದೇ ಓವರ್‌ನಲ್ಲಿ ಮತ್ತೂಂದು ಯಶಸ್ಸು ತಂದಿತ್ತರು. ಮೊಯಿನ್ ಅಲಿಗೆ ಮೊದಲ ಎಸೆತದಲ್ಲೇ ಪೆವಿಲಿಯನ್ ಹಾದಿ ತೋರಿಸಿದರು. ಡೆತ್ ಓವರ್‌ಗಳಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 65 ರನ್ ಮಾಡಿತು. ಸ್ಕೋರ್ ಪಟ್ಟಿ
ಇಂಗ್ಲೆಂಡ್
ಜೇಸನ್ ರಾಯ್ ಸಿ ಪಂತ್ ಬಿ ಮಲಿಕ್ 27
ಜಾಸ್ ಬಟ್ಲರ್ ಬಿ ಆವೇಶ್ 18
ಡೇವಿಡ್ ಮಲಾನ್ ಸಿ ಪಂತ್ ಬಿ ಬಿಷ್ಣೋಯಿ 77
ಫಿಲಿಪ್ ಸಾಲ್ಟ್ ಬಿ ಹರ್ಷಲ್ 8
ಲಿವಿಂಗ್‌ಸ್ಟೋನ್ ಔಟಾಗದೆ 42
ಮೊಯಿನ್ ಅಲಿ ಸಿ ಹರ್ಷಲ್ ಬಿ ಬಿಷ್ಣೋಯಿ 0
ಹ್ಯಾರಿ ಬ್ರೂಕ್ ಸಿ ಬಿಷ್ಣೋಯಿ ಬಿ ಹರ್ಷಲ್ 19
ಕ್ರಿಸ್ ಜೋರ್ಡನ್ ರನೌಟ್ 11
ಇತರ 13
ಒಟ್ಟು (7 ವಿಕೆಟಿಗೆ) 215
ವಿಕೆಟ್ ಪತನ: 1-31, 2-61, 3-84, 4-168, 5-169, 6-197, 7-215.
ಬೌಲಿಂಗ್: ಆವೇಶ್ ಖಾನ್ 4-0-43-1
ಉಮ್ರಾನ್ ಮಲಿಕ್ 4-0-56-1
ರವಿ ಬಿಷ್ಣೋಯಿ 4-0-30-2
ರವೀಂದ್ರ ಜಡೇಜ 4-0-45-0
ಹರ್ಷಲ್ ಪಟೇಲ್ 4-0-35-2 ಭಾರತ
ರೋಹಿತ್ ಶರ್ಮ ಸಿ ಸಾಲ್ಟ್ ಬಿ ಟಾಪ್ಲಿ 11
ರಿಷಭ್ ಪಂತ್ ಸಿ ಬಟ್ಲರ್ ಬಿ ಟಾಪ್ಲಿ 1
ವಿರಾಟ್ ಕೊಹ್ಲಿ ಸಿ ರಾಯ್ ಬಿ ವಿಲ್ಲಿ 11
ಸೂರ್ಯಕುಮಾರ್ ಸಿ ಸಾಲ್ಟ್ ಬಿ ಅಲಿ 117
ಶ್ರೇಯಸ್ ಅಯ್ಯರ್ ಸಿ ಬಟ್ಲರ್ ಬಿ ಟಾಪ್ಲಿ 28
ದಿನೇಶ್ ಕಾರ್ತಿಕ್ ಎಲ್‌ಬಿಡಬ್ಲ್ಯು ವಿಲ್ಲಿ 6
ರವೀಂದ್ರ ಜಡೇಜ ಎಲ್‌ಬಿಡಬ್ಲ್ಯು ಗ್ಲೀಸನ್ 7
ಹರ್ಷಲ್ ಪಟೇಲ್ ಸಿ ಗ್ಲೀಸನ್ ಬಿ ಜೋರ್ಡನ್ 5
ಆವೇಶ್ ಖಾನ್ ಔಟಾಗದೆ 1
ರವಿ ಬಿಷ್ಣೋಯಿ ಬಿ ಜೋರ್ಡನ್ 2
ಇತರ 9
ಒಟ್ಟು (9 ವಿಕೆಟಿಗೆ) 198
ವಿಕೆಟ್ ಪತನ: 1-2, 2-13, 3-31, 4-150, 5-166, 6-173, 7-191, 8-196, 9-198.
ಬೌಲಿಂಗ್: ಡೇವಿಡ್ ವಿಲ್ಲಿ 4-0-40-2
ರೀಸ್ ಟಾಪ್ಲಿ 4-0-22-3
ರಿಚರ್ಡ್ ಗ್ಲೀಸನ್ 4-0-31-1
ಕ್ರಿಸ್ ಜೋರ್ಡನ್ 4-0-37-2
ಲಿಯಮ್ ಲಿವಿಂಗ್‌ಸ್ಟೋನ್ 2-0-36-0
ಮೊಯಿನ್ ಅಲಿ 2-0-31-1