Advertisement

Germany:ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯಕುಮಾರ್ ಯಾದವ್

05:01 PM Jan 18, 2024 | Team Udayavani |

ಮ್ಯೂನಿಚ್‌: ಭಾರತದ ಅಗ್ರ ಶ್ರೇಯಾಂಕದ ಟಿ 20 ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್  ಜನವರಿ 17 ರಂದು ಜರ್ಮನಿಯ ಮ್ಯೂನಿಚ್‌ನಲ್ಲಿ ಯಶಸ್ವಿ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

Advertisement

ಸೂರ್ಯಕುಮಾರ್ ಅವರ ಪತ್ನಿ ದೇವಿಶಾ ಅವರೊಂದಿಗೆ ಜರ್ಮನಿಯಲ್ಲಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸೂರ್ಯ ಕುಮಾರ್ ಅವರು ಭಾರತ ಮತ್ತು ಅಫ್ಘಾನಿಸ್ಥಾನ ನಡುವಿನ ರೋಚಕ ಹಣಾಹಣಿಯನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ.

”ಶಸ್ತ್ರಚಿಕಿತ್ಸೆ ನಡೆದಿದೆ. ಎಲ್ಲರ ಕಾಳಜಿ ಮತ್ತು ನನ್ನ ಆರೋಗ್ಯ ಚೇತರಿಕೆಗೆ ಕೋರಿದ ಶುಭಾಶಯಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಿಮಗೆ ಹೇಳಲು ನನಗೆ ಸಂತೋಷಪಡುತ್ತೇನೆ” ಎಂದು ಸೂರ್ಯಕುಮಾರ್ ಯಾದವ್ ಎಕ್ಸ್ ನಲ್ಲಿ ನಗು ಮೊಗದ ಫೋಟೋ  ಪೋಸ್ಟ್ ಮಾಡಿದ್ದಾರೆ.

”ನೀವು ಶೀಘ್ರವಾಗಿ ಚೇತರಿಸಿಕೊಳ್ಳಲು ಬಯಸುತ್ತೇವೆ” ಎಂದು ಬಿಸಿಸಿಐ ಸೂರ್ಯಕುಮಾರ್ ಯಾದವ್ ಪೋಸ್ಟ್ ಮಡಿದ ಫೋಟೋವನ್ನು ರಿಪೋಸ್ಟ್ ಮಾಡಿದೆ.

2022 ರಲ್ಲಿ ಜರ್ಮನಿಯಲ್ಲೇ ಕೆ.ಎಲ್. ರಾಹುಲ್ ಅವರ ಸಹ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

Advertisement

Advertisement

Udayavani is now on Telegram. Click here to join our channel and stay updated with the latest news.

Next