Advertisement

ಟಿ 20 ಇನ್ನೊಂದು ದಾಖಲೆ ಬರೆದ ನಂ.1 ಸೂರ್ಯಕುಮಾರ್ ಯಾದವ್

05:24 PM Nov 06, 2022 | Team Udayavani |

ನವದೆಹಲಿ : ಟಿ 20 ಕ್ರಿಕೆಟ್ ನಲ್ಲಿ ಸೂರ್ಯಕುಮಾರ್ ಯಾದವ್ ಭಾನುವಾರ ಕ್ಯಾಲೆಂಡರ್ ವರ್ಷದಲ್ಲಿ 1,000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್ ಮ್ಯಾನ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ.

Advertisement

ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ಟಿ 20 ವಿಶ್ವಕಪ್ 2022 ಸೂಪರ್ 12 ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಈ ಸಾಧನೆ ಮಾಡಿದ್ದು,

ಟಿ 20 ನಂಬರ್ 1 ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್ ಅವರು 25 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿ ಭಾರತ ತಂಡ 20 ಓವರ್‌ಗಳಲ್ಲಿ 186/5 ಗೆ ಮುನ್ನಡೆಸಿದರು. ಅವರ ಸ್ಪೋಟಕ ಇನ್ನಿಂಗ್ಸ್‌ ಆರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಕ್ಯಾಲೆಂಡರ್ ವರ್ಷದಲ್ಲಿ 1026 ರನ್ ಗಳಿಸಿ ದಾಖಲೆ ಬರೆದಿದ್ದಾರೆ.

2022ರಲ್ಲಿ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಪಾಕಿಸ್ಥಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 23 ಪಂದ್ಯಗಳಿಂದ 924 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಕೊಹ್ಲಿ 19 ಪಂದ್ಯಗಳಿಂದ 731 ರನ್ ಗಳಿಸಿ ಅಗ್ರ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ಸೂರ್ಯ, ಅಶ್ವಿನ್ ಆಟಕ್ಕೆ ತಲೆಬಾಗಿದ ಜಿಂಬಾಬ್ವೆ; ಭಾರತಕ್ಕೆ ಸೆಮಿ ಫೈನಲ್ ಎದುರಾಳಿ ಯಾರು?

Advertisement

ಪಾಕಿಸ್ಥಾನದ ವಿಕೆಟ್‌ಕೀಪರ್-ಬ್ಯಾಟ್ಸ್ ಮ್ಯಾನ್ ರಿಜ್ವಾನ್ ಅವರು ಒಂದು ವರ್ಷದಲ್ಲಿ 1000 ರನ್ ಗಳಿಸಿದ ಇತಿಹಾಸ ಹೊಂದಿದ್ದಾರೆ. ಅವರು 2021 ರಲ್ಲಿ 29 ಪಂದ್ಯಗಳಿಂದ 1326 ರನ್ ಗಳಿಸಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು ಬ್ಯಾಟ್ಸ್ ಮ್ಯಾನ್ ಆಗಿ ದಾಖಲೆ ಬರೆದ ವರ್ಷದಲ್ಲಿ ಒಂದು ಶತಕ ಮತ್ತು 12 ಅರ್ಧ ಶತಕಗಳನ್ನು ದಾಖಲಿಸಿದ್ದರು.

ಟಿ 20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಐದು ಇನ್ನಿಂಗ್ಸ್‌ಗಳಿಂದ ಮೂರು ಅರ್ಧಶತಕಗಳು ಸೇರಿದಂತೆ 246 ರನ್ ಗಳಿಸಿ ಇದುವರೆಗೆ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next