Advertisement
ಎಂಬ್ರೇರ್ 190 ವಿಮಾನವು ಅಜೆರ್ಬೈಜಾನ್ ನ ರಾಜಧಾನಿ ಬಾಕುವಿನಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು ಈ ವೇಳೆ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡ ವಿಮಾನ ಇನ್ನೇನು ಬಯಲು ಪ್ರದೇಶದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ವೇಳೆ ವಿಮಾನದ ಒಳಗಿದ್ದ ಪ್ರಯಾಣಿಕನೋರ್ವ ಅಂತಿಮ ಕ್ಷಣದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಅದರಲ್ಲಿ ಭಯಭೀತರಾದ ಪ್ರಯಾಣಿಕರು ದೇವರನ್ನು ನೆನೆದು ಪ್ರಾರ್ಥಿಸುವ ಆಡಿಯೋ ಕೇಳಿದೆ, ಜೊತೆಗೆ ಪ್ರಯಾಣಿಕರ ಬಳಿ ಆಕ್ಸಿಜೆನ್ ಮಾಸ್ಕ್ ನೇತಾಡುವುದು ಕಾಣಬಹುದು ಕೊನೆಯದಾಗಿ ವಿಮಾನ ಬೆಂಕಿ ಹೊತ್ತಿಕೊಂಡು ಬಯಲು ಪ್ರದೇಶದಲ್ಲಿ ಪತನವಾಗುತ್ತದೆ ಇದಾದ ಬಳಿಕ ಕೆಲ ಪ್ರಯಾಣಿಕರು ಗಾಯಗೊಂಡು ಚೆಲ್ಲಾಪಿಲ್ಲಿಯಾಗಿ ಕ್ಯಾಬಿನ್ ಒಳಗೆ ಬಿದ್ದಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Related Articles
Advertisement