Advertisement

ಸ್ಥಗಿತಗೊಂಡ ಕ್ವಾರಿಗಳಿಗೆ ಸರ್ವೆ ಕಾರ್ಯ

01:12 PM Feb 19, 2022 | Team Udayavani |

ದೇವನಹಳ್ಳಿ: ಬಂಡೆ ಪ್ರದೇಶಕ್ಕೆ ಹೆಸರುವಾಸಿಯಾಗಿರುವ ತಾಲೂಕಿನ ಕೊಯಿರ, ಚಿಕ್ಕಗೊಲ್ಲಹಳ್ಳಿ, ಅರುವನಹಳ್ಳಿ ಮತ್ತು ರಾಮನಾಥಪುರ ಗಣಿಗಾರಿಕೆ ಪ್ರದೇಶದಲ್ಲಿ ಈ ಹಿಂದೆ ಗಣಿಗಾರಿಕೆ ನಡೆಸಿ ಸ್ಥಗಿತಗೊಂಡಿರುವ ಕಲ್ಲು ಕ್ವಾರಿ ಸ್ಥಳಕ್ಕೆ ಸರ್ಕಾರದ ಅಂಗ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಸರ್ವೆ ಕಾರ್ಯ ನಡೆಸಿದರು.

Advertisement

ಸ್ಥಗಿತಗೊಂಡಿದ್ದ ಬಂಡೆ ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಸರ್ವೇ ಕಾರ್ಯ ಮಾಡಿ ಇಲ್ಲಿನ ವಸ್ತುಸ್ಥಿತಿಯನ್ನು ಸರ್ಕಾರಕ್ಕೆ ನೀಡಲಿದೆ. ಹಲವಾರು ವರ್ಷಗಳ ಹಿಂದೆಯೇ ಈ ಕಲ್ಲು ಗಣಿಗಾರಿಕೆ ಸ್ಥಗಿತ ಗೊಳಿಸಲಾಗಿತ್ತು. ಕೊಯಿರ ಬೆಟ್ಟದ ಕಲ್ಲು ವಿಧಾನಸೌಧ ನಿರ್ಮಾಣಕ್ಕೆ ಬಳಸಲಾಗಿದೆ. ದೇಶ-ವಿದೇಶಗಳಲ್ಲೂ ಇಲ್ಲಿನ ಕಲ್ಲಿನ ಬಳಕೆ ಮಾಡಿದ್ದಾರೆ. ಈ ಬೆಟ್ಟಕ್ಕೆ ಇತಿಹಾಸವಿದೆ.

ವೈಜ್ಞಾನಿಕ ತಂತ್ರಜ್ಞಾನ ಬಳಕೆಗೆ ಆದ್ಯತೆ: ಸಾದಹಳ್ಳಿಯಲ್ಲಿ ನಡೆಯುತ್ತಿದ್ದ ಕ್ವಾರಿಯನ್ನು ಸರ್ಕಾರ ನಿಲ್ಲಿಸಿದ್ದರಿಂದ ಅದರ ಬಗ್ಗೆ ವಿದೇಶದಲ್ಲಿ ಗಣಿಗಾರಿಕೆ ಹೇಗೆ ನಡೆಸುತ್ತಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ವಿದೇಶದಲ್ಲಿ ವೈಜ್ಞಾನಿಕವಾಗಿ ವಿನೂತನ ತಂತ್ರಜ್ಞಾನ ಬಳಸಿಕೊಂಡು ಗಣಿಪ್ರದೇಶದ ಸುತ್ತಮುತ್ತಲು ಕಲ್ಲನ್ನು ತೆಗೆಯುತ್ತಿದ್ದಾರೆ. ಚೀನಾದಲ್ಲಿ ಗಣಿಗಾರಿಕೆ ಪ್ರದೇಶದ ಸುತ್ತಲು 3-4 ಅಂತಸ್ತಿನ ಮಹಡಿಗಳಿದ್ದರೂ, ಯಾರಿಗೂ ತೊಂದರೆಯಾಗದಂತೆ ಗಣಿಗಾರಿಕೆ ನಡೆಸುತ್ತಿರುವುದು ನಿದರ್ಶನವಾಗಿದೆ.

2011ರಲ್ಲಿ ಚೀನಾಗೆ ಭೇಟಿ ನೀಡಿದ್ದೇನೆ. ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ತಂತ್ರಜ್ಞಾನ, ಅನುಭವ ಮತ್ತು ಗುಣಮಟ್ಟವನ್ನು ಅಳವಡಿಸಿ ಕೊಂಡರೆ ಗಣಿಗಾರಿಕೆಯಿಂದ ಯಾರೊಬ್ಬರಿಗೂ ತೊಂದರೆಯಾಗುವುದಿಲ್ಲ ಎಂದು ಗಣಿ ಮಾಲೀಕ ಗೋಪಾಲ್‌ ಗೌಡ ಹೇಳಿದರು.

ಮರು ಪರಿಶೀಲಿಸಿ ಸರ್ಕಾರಕ್ಕೆ ವರದಿ: ತಿಪ್ಪಗೊಂಡ ನಹಳ್ಳಿ ಜಲಾಶಯದ ನದಿಮೂಲ ವರದಿಯನ್ನು 2013ರಲ್ಲಿ ಆನ್‌ ಟ್ರಿಕ್ಸ್‌ ಮತ್ತು ಇಸ್ರೋ ಅವರು ನೀಡಿ ದ್ದರು. ಅದರ ವರದಿಯಲ್ಲಿ ನೀಡಿರುವ ಝೊàನ್‌ ಮರುಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸರ್ಕಾರದ ಅಂಗ ಸಂಸ್ಥೆ ಕರ್ನಾಟಕ ರಾಜ್ಯರಿಮೋಟ್‌ ಸೆನ್ಸಿಂಗ್‌ ಅಧಿಕಾರಿಗಳ ತಂಡ ಕ್ವಾರಿ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿ ವರದಿ ಸಲ್ಲಿಸಲು ಮುಂದಾಗಿದ್ದಾರೆ

Advertisement

ಗಣಿಗಾರಿಕೆಯಿಂದ ಪುರಾತನ ಕುರುಹು ನಾಶ :  ಗಣಿಗಾರಿಕೆಗೆ ಅನುಮತಿ ಕೊಡುವುದಕ್ಕಿಂತ ಮುಂಚೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿಪರಿಶೀಲನೆ ನಡೆಸಬೇಕು. ಈಗಾಗಲೇಗಣಿಗಾರಿಕೆಗೆ ಇಲ್ಲಿ ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಸರ್ವೇ ಕಾರ್ಯ ನಡೆಯುತ್ತಿರುವುದುಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.ಪುರಾತನ ಮಂಟಪ, ದೇವಾಲಯ, ಜೀವವೈವಿದ್ಯತೆಯ ತಾಣಗಳ ಅಭಿವೃದ್ಧಿಪಡಿಸಲು ದಾನಿ ಮುಂದಾಗುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಿ ಪುರಾತನ ಕುರುಹು ನಾಶವಾಗಲು ಗಣಿಗಾರಿಕೆ ಕಾರಣವಾಗುತ್ತಿದೆ ಎಂದು ಕೊಯಿರ ಆರ್‌ಟಿಐ ಕಾರ್ಯಕರ್ತ ಚಿಕ್ಕೆಗೌಡ ಆರೋಪಿಸಿದ್ದಾರೆ.

ಗಣಿಗಾರಿಕೆಯಲ್ಲಿ ಕಲ್ಲು ತೆಗೆಯಲು ಅನುಸರಿಸಬೇಕಾದ ನಿಯಮ :  

  • ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ಗುರುತಿಸಿರುವ ವಿಸ್ತೀರ್ಣದಷ್ಟೇ ಗಣಿಗಾರಿಕೆ ಮಾಡಲು ಲೀಸ್‌ದಾರರಿಗೆ ಅವಕಾಶ.
  • ಗಣಿಗಾರಿಕೆ ಪ್ರದೇಶದಲ್ಲಿ ಲೀಸ್‌ ಪಡೆದ ನಾಮಫ‌ಲಕ ಅಳವಡಿಸಬೇಕು.
  • ಗಣಿಗಳಲ್ಲಿ ಪಿಲ್ಲರ್ ಹಾಕಿರಬೇಕು. ವೈರ್‌ಸ ಕಟ್ಟಿಂಗ್‌ ತಂತ್ರಜ್ಞಾನದಲ್ಲಿ ಮಾಡಬೇಕು.
  • ಗಣಿಗಾರಿಕೆ ಪ್ರದೇಶದ ಸುತ್ತಲು ತಂತಿ ಬೇಲಿ ಹಾಕಬೇಕು.
  • ಪರವಾನಿಗೆ ಪಡೆದುಕೊಂಡಿದ್ದರೆ ಮಾತ್ರ ಕ್ವಾರಿ ನಡೆಸಲು ಅವಕಾಶ.
  • ಸರ್ಕಾರಕ್ಕೆ ರಾಯಲ್‌ಟೀ, ತೆರಿಗೆ ಮತ್ತು ಡಿಎಂಎಫ್ ಕಟ್ಟಬೇಕು.
  • ನಿರ್ದಿಷ್ಟ ಆಳಕ್ಕೂ ಹೆಚ್ಚುವರಿಗೆ ಡಿಜಿಎಂಎಸ್‌ನಿಂದ ಅನುಮತಿ ಕಡ್ಡಾಯ.
  • ಪರಿಸರಕ್ಕೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಸಲು ಅವಕಾಶ.
  • ಗ್ರಾನೈಟ್‌ ಪರಿಕರಗಳಿಗೆ ಮತ್ತು ಅಭಿವೃದ್ಧಿಗಾಗಿ ಕಲ್ಲು ತೆಗೆಯಲು ಅನುಮತಿ.
  • ಲೀಸ್‌ ಕಾಲಾವಧಿಯಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ.
Advertisement

Udayavani is now on Telegram. Click here to join our channel and stay updated with the latest news.

Next