Advertisement

ಲಂಚ ಪಡೆಯುತ್ತಿದ್ದ ಸರ್ವೇಯರ್‌ ಎಸಿಬಿ ಬಲೆಗೆ

06:31 PM Feb 10, 2021 | Team Udayavani |

ಯಾದಗಿರಿ: ನಗರದ ಹೊಸಳ್ಳಿ ಕ್ರಾಸ್‌ ಬಳಿಯ ಹೋಟೆಲ್‌ ವೊಂದರಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಸರ್ವೇಯರ್‌ ಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Advertisement

ತಾಲೂಕಿನ ಚಾಮನಳ್ಳಿ ತಾಂಡದ ಸಂಜು ಎಂಬುವವರ ಹೊಲವನ್ನು ಅಳೆಯುವ ಸಂಬಂಧ ಸರ್ವೇಯರ್‌ ರಘುರಾಮ ಎನ್ನುವವರು 5 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಸಂಜೆ 2 ಸಾವಿರ ರೂ. ಪಡೆಯುವ ವೇಳೆ ಎಸಿಬಿ ಇನ್ಸ್‌ಪೆಕ್ಟರ್‌ ಗುರುಪಾದ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಸರ್ವೇಯರ್‌ರನ್ನು ವಶಕ್ಕೆ ಪಡೆದಿರುವ ಕುರಿತು ಅ ಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಂಚ ಪಡೆಯುತ್ತಿದ್ದ ವೇಳೆ ಬಳಸಿದ ಇತರೆ ವಸ್ತುಗಳನ್ನು ಸಹ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕೊಂಕಲ್‌ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಡಗೇರಾ: ತಾಲೂಕಿನ ಕೊಂಕಲ್‌ ಗ್ರಾಪಂ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಭೀಮನಗೌಡ ಮಾ.ಪಾ., ಉಪಾಧ್ಯಕ್ಷ ರಾಗಿ ಗೌರಮ್ಮ ತಿಪ್ಪಣ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ವಡಗೇರಾ ತಹಶೀಲ್ದಾರ್‌ ಸುರೇಶ್‌ ಅಂಕಲಗಿ ತಿಳಿಸಿದ್ದಾರೆ. ಈ ಮೂಲಕ ಕೊಂಕಲ್‌ ಗ್ರಾಮ ಪಂಚಾಯಿತಿಯನ್ನು ಈ ಬಾರಿ ಕಾಂಗ್ರೆಸ್‌ ತನ್ನದಾಗಿಕೊಂಡಿದೆ.

ಒಟ್ಟು 17 ಸದಸ್ಯರ ಬಲ ಹೊಂದಿದ್ದು, ಕಾಂಗ್ರೆಸ್‌ ಬೆಂಬಲಿತ 9, ಬಿಜೆಪಿ ಬೆಂಬಲಿತ 8 ಸದಸ್ಯರನ್ನು ಹೊಂದಿತ್ತು. ಅಧ್ಯಕ್ಷ ಸ್ಥಾನಕ ಮಲ್ಲಿಕಾರ್ಜುನಗೌಡ ಭೀಮನಗೌಡ ಮಾ.ಪಾ. ಮತ್ತು ಅಂಬಿಕಾ ರಡ್ಡೆಪ್ಪ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸಮ್ಮ ಚಂದ್ರಶೇಖರ್‌ ಮತ್ತು ಗೌರಮ್ಮ ತಿಪ್ಪಣ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಮಲ್ಲಿಕಾರ್ಜುನಗೌಡ ಮಾ.ಪಾ 9 ಮತಗಳನ್ನು ಪಡೆದರೆ, ಅಂಬಿಕಾ ರಡ್ಡೆಪ್ಪ 8 ಮತ ಪಡೆದು ಸೋಲು ಅನುಭವಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ತಿಪ್ಪಣ 9 ಮತ ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಬಸಮ್ಮ 8 ಮತ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next